ಅಮೆಮಾರ್‌ನಲ್ಲಿ ಮೀಲಾದ್ ಆಚರಣೆ

Update: 2016-12-12 04:09 GMT

ಫರಂಗಿಪೇಟೆ, ಡಿ.12: ಅಮೆಮಾರ್ ಬದ್ರಿಯಾ ಮದ್ರಸ ಮತ್ತು ಜುಮಾ ಮಸೀದಿ ವತಿಯಿಂದ ಇಂದು ಬೆಳಗ್ಗೆ ಮೀಲಾದುನ್ನಬಿ ಆಚರಿಸಲಾಯಿತು.

ಮೀಲಾದ್ ಪ್ರಯುಕ್ತ ಮಸೀದಿಯ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ. ಧ್ವಜಾರೋಹಣ ನೆರವೇರಿಸಿದರು. ಮುದರ್ರಿಸ್ ಅಬೂಸ್ವಾಲಿಹ್ ಫೈಝಿ ದುಆಗೈದರು.

ಈ ಸಂದರ್ಭ ಸದರ್ ಮುಅಲ್ಲಿಮ್ ಸಿದ್ದೀಖ್ ಮೌಲವಿ, ಅಶ್ರಫ್ ಝೈನಿ, ಇಸ್ಹಾಕ್ ಅರ್ಶದಿ, ಅಬೂಬಕರ್ ಮದನಿ, ಇಲ್ಯಾಸ್ ಮದನಿ, ರಝಾಕ್ ಅರ್ಶದಿ, ಮಸೀದಿಯ ಪದಾಧಿಕಾರಿಗಳಾದ ಸುಲೈಮಾನ್ ಉಸ್ತಾದ್, ಜಮಾಲ್, ಇಬ್ರಾಹೀಂ, ಶಾಫಿ ಹಾಗೂ ಮದ್ರಸ ವಿದ್ಯಾರ್ಥಿಗಳು, ಜಮಾಅತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News