ಮುಂಡಗೋಡ : ಮೀಲಾದುನ್ನಬಿ ಆಚರಣೆ

Update: 2016-12-12 13:00 GMT

ಮುಂಡಗೋಡ, ಡಿ. 12  : ಅಲ್ಲಾಹನ ಸಂದೇಶಗಳನ್ನು ಜನರಿಗೆ ನೀಡಿದ ಅಲ್ಲಾಹನ ಕೊನೆಯ ಪ್ರವಾದಿ ಮಹಮ್ಮ್ಮದ ಪೈಗಂಬರ ರ ಜಶ್ನ-ಎ-ಈದ್‌ಮಿಲಾದನ್ನುಬಿ    (ಈದ್ ಮಿಲಾದ)ಯನ್ನು ಪಟ್ಟಣ ಹಾಗು ತಾಲೂಕಿನ ಮುಸ್ಲಿಂ ಬಾಂಧವರು ಸಡಗರ ಸಂಭ್ರಮ ಶೃದ್ಧಾ ಭಕ್ತಿ ಶಾಂತಿಯಿಂದ ಸೋಮವಾರ ಆಚರಿಸಿದರು.

ಪಟ್ಟಣದ ನಾಲ್ಕು ಮಸ್ಜೀದ ಜಮಾಅತಿನ ಹಾಗು ಗ್ರಾಮೀಣ ಭಾಗದ ಮುಸ್ಲೀಂ ಬಾಂದವರು ಪಟ್ಟಣದ ಯಲ್ಲಾಪೂರ ರಸ್ತೆ, ಬಸವನ ಬೀದಿ, ಶಿರಸಿ ರಸ್ತೆ, ಹುಬ್ಬಳ್ಳಿ ರಸ್ತೆ,ಬಂಕಾಪುರ ರಸ್ತೆ, ಕೃಷಿ ಇಲಾಖೆ ರಸ್ತೆ, ನೆಹರು ನಗರ ಇಂದಿರಾ ನಗರ ಆನಂದ ನಗರ ತಾಲೂಕ ಪಂಚಾಯತಿ ರಸ್ತೆ, ಕಲಾಲ ಓಣಿ ನೂರಾನಿ ಓಣಿ ಕಿಲ್ಲೇ ಓಣಿ ಬಡಾವಣೆಗಳಲ್ಲಿ ಮೆರವಣಿಗೆ ಸಂಚರಿಸಿತು.

ಮೆರವಣಿಗೆಯುದ್ದಕ್ಕೂ ದೇವ ರ ನಾಮಸ್ಮರಣೆ(ನಾತೆ) ಮಾಡಲಾಗುತ್ತಿತ್ತು. ಮೆರಣಿಗೆಯಲ್ಲಿದ್ದವರಿಗೆ ಹಾಗೂ ಅಕ್ಕಪಕ್ಕದ ರಸ್ತೆಯಲ್ಲಿರುವ ಇತರರಿಗೂ ಸಿಹಿ ಹಾಗು ಶರಬತ್ ಹಂಚಲಾಯಿತು.. ಮೆರವಣಿಗೆಯಲ್ಲಿ ಅಬಾಲ ವೃದ್ದರು ಎನ್ನದೆ ಎಲ್ಲ ವಯೋಮಾನದ ಮುಸ್ಲೀಂ ಬಾಂದವರು ಭಾಗವಹಿಸಿದ್ದರು. ದ್ವಿ ಚಕ್ರ ವಾಹನ ಸವಾರರು,ಹಾಗು ಇತರೆ ವಾಹನದ ಮಾಲಕರು ತಮ್ಮ ತಮ್ಮ ವಾಹನಗಳನ್ನು ಶೃಂಗಾರ ಮಾಡಿಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯು 1 ಗಂಟೆಗೆ ನೂರಾನಿ ಮಸೀದಿ ತಲುಪಿದ್ದಂತೆ ಮಧ್ಯಾಹ್ನದ ನಮಾಜನ್ನು ಮಾಡಿಕೊಂಡು ಧ್ವಜಾರೋಹಣ ನರವೇರಿತು. . ತದನಂತರ ಹಜರತ್ ಮಹ್ಮದ ಪೈಗಂಬರರ ಹೆಸರಿನಲ್ಲಿ ಫಾತೇಹಖಾಃನಿಯನ್ನು ಮಾಡಿ ಸಿಹಿ ಹಂಚಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. 
ಮೆರವಣಿಗೆಯಲ್ಲಿ ಮುಸ್ಲೀಂ ಹಿರಿಯ ಮುಖಂಡ ಬಿ.ಎಫ್.ಬೆಂಡಿಗೇರಿ ಹಿರಿಯರಾದ ನಾಜೀಮಆಲಾ ಮೋದಿನಖಾನ ಪಠಾಣ, ಬಾಬಾ ಬೆಂಡಿಗೇರಿ, ಅಬ್ದುಲಖಾದರ ಶೇಖ,ನಾಲ್ಕು ಮಸ್ಜೀದಿನ ಅಧ್ಯಕ್ಷರಾದ ಸಲೀಂ ನಂದಿಗಟ್ಟಿ (ನೂರಾನಿ ಮಸ್ಜೀದ), ನೂರ ಅಹ್ಮದ ಗಡವಾಲೆ(ಮದಿನಾ ಮಸ್ಜೀದ), ಮಹಬೂಸಾಬ ಮಲಬಾರಿ(ಬಿಲಾಲ ಮಸ್ಜೀದ) ಹಾಗು ರಜಾಕೀಯಾ ಮಸ್ಜೀದ ನ ಹಿರಿಯರು ಹಾಗು ಜಮಾತಿನ ಸೆಕ್ರೇ ಟರಿಗಳಾದ ಅನ್ವರಖಾನ ಪಠಾಣ, ಮಹ್ಮದ ಜಾಫರ ಹಂಡಿ, ಬಾಬುಸಾಬ ಶೇಖ , ಹಾಗು ಮುಸ್ತಾಕ ನೇತ್ರಿ ಇವರ ನೇತೃತ್ವದಲ್ಲಿ ನಡೆಯಿತು.
ಈದ-ಮಿಲಾದ ಪ್ರಯುಕ್ತ  ಮಸೀದಿಗಳನ್ನು ಸಿಂಗರಿಸಲಾಗಿತ್ತು.  ಮುಸ್ಲಿಂ ಬಡಾವಣೆಗಳು ಹಾಗು ಪ್ರಮುಖ ಸರ್ಕಲ್‌ಗಳು ಸೇರಿದಂತೆ ಪಟ್ಟಣವು ಹಸಿರಮಂವಾಗಿ ಕಂಗೋಳಿಸುವಂತೆ ಶೃಂಗಾರಮಾಡಲಾಗಿತ್ತು.  ಪಿಎಸ್ಐ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News