ಉಚಿತ ಹೋಮಿಯೋಪಥಿ ವೈದ್ಯಕೀಯ ತಪಾಸಣಾ ಶಿಬಿರ

Update: 2016-12-14 13:54 GMT

ಬಂಟ್ವಾಳ,ಡಿ.14: ತುಂಬೆ ಫಾದರ್ ಮುಲ್ಲರ್ ಹೋಮಿಯೋಪಥಿ ಹೊರರೋಗಿ ವಿಭಾಗ ವತಿಯಿಂದ ಉಚಿತ ಹೋಮಿಯೋಪಥಿ ವೈದ್ಯಕೀಯ ತಪಾಸಣಾ ಶಿಬಿರ ಡಿ. 17ರಂದು ಬೆಳಗ್ಗೆ 9ರಿಂದ 4 ಗಂಟೆವರೆಗೆ ಜರಗಲಿದೆ ಎಂದು ಆಡಳಿತಾಧಿಕಾರಿ ಫಾದರ್ ರೋಶನ್ ಕ್ರಾಸ್ತ ತಿಳಿಸಿದ್ದಾರೆ. ಶಿಬಿರದಲ್ಲಿ ಮಕ್ಕಳ ಖಾಯಿಲೆಗಳು, ಮಹಿಳೆಯರ ಖಾಯಿಲೆಗಳು, ವೃದ್ಧಾಪ್ಯದ ಸಮಸ್ಯೆಗಳು ಹಾಗೂ ಇತರ ಖಾಯಿಲೆಗಳಿಗೆ ಉಚಿತ ಔಷಧಿ ಮತ್ತು ಚಿಕಿತ್ಸೆ ನೀಡಲಾಗುತ್ತದೆ.

 ಶಿಬಿರವನ್ನು ತುಂಬೆ ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು, ಸಾಮಾಜಿಕ ಸೇವಾ ಕರ್ತ ಸಿಲ್ವೆಸ್ಟರ್ ಡಿ’ಸೋಜ, ಕೊಡ್ಮಾಣ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ಹೋಮಿಯೊಪತಿ ಫಾ. ಮುಲ್ಲರ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪ್ರಸಾದ್, ವೈದ್ಯಕೀಯ ಅಧೀಕ್ಷಕ ಡಾ ಗಿರೀಶ್ ನಾವಡ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News