ದಲಿತ ಕಾವ್ಯ ಮೀಮಾಂಸೆ ಕಮ್ಮಟದ ಸಮಾರೋಪ ಸಮಾರಂಭ

Update: 2016-12-15 13:23 GMT

ಮಂಗಳೂರು, ಡಿ.15 :  ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂದೇಶ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಸಿದ 3 ದಿನಗಳ ದಲಿತ ಕಾವ್ಯ ಮೀಮಾಂಸೆ ಕಮ್ಮಟದ ಸಮಾರೋಪ ಸಮಾರಂಭವು ಇಂದಿಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಕವಿಗಳಾದ ಡಾ ಎಲ್. ಹನುಮಂತಯ್ಯ ಮಾತನಾಡಿ,  ದಲಿತ ಸಾಹಿತ್ಯ ಅಂತರ್ಗಾಮಿಯಾಗಿ ಕೆಲಸ ಮಾಡುತ್ತಿರುತ್ತದೆ. ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಬಿಡುಗಡೆಗೆ ಪ್ರಯತ್ನಿಸುತ್ತದೆ. ಇಲ್ಲಿ ಬಿಡುಗಡೆ ಮುಖ್ಯವಾಗಿರುತ್ತದೆ. ಸಾಹಿತ್ಯ ಬರೆಯಬೇಕೆಂದು ಹೊರಟವನಿಗೆ ಬರೀ ಅಕ್ಷರಗಳೇ ಅಲ್ಲ, ತನ್ನ ಬಿಡುಗಡೆಯ ಅಕ್ಷರಗಳೆಂದು ಪರಿಭಾವಿಸುತ್ತಾನೆ. ಸಂಸ್ಕೃತಿಯ ಹುಡುಕಾಟದಲ್ಲಿ ದಲಿತ ಸಾಹಿತ್ಯವಿದೆ. ದಲಿತ ಸಾಹಿತ್ಯ ಬುಸುಗುಡುವ ಹಾವಾಗಬಾರದು. ಸಂತ ನಿರ್ಭಯದೀ ಶಾಂತ ರೀತಿಯಲ್ಲಿ ಮಲಗಿರುತ್ತಾನೆ ಹಾಗೆಯೇ, ದಲಿತ ಸಾಹಿತ್ಯಕ್ಕೆ ಸಂತ-ತನ ಇರಬೇಕು. ಸಂಕಟದ ಹುಡುಕಾಟ ಸರಳವಾದದಲ್ಲ. ಶಿಬಿರಾರ್ಥಿಗಳು ತಮ್ಮ ಮಾನ-ದಂಡಗಳ ಮೂಲಕ ಓದಬೇಕು. ದಲಿತ ಸಾಹಿತ್ಯ ಕನ್ನಡ ಕಾವ್ಯದ ಭಾಗ. ಶಿಬಿರಾರ್ಥಿಗಳಿಗೆ ಕನ್ನಡದ ಆದ್ಯಾ ಅಧ್ಯಯನ ಬಹಳ ಮುಖ್ಯ ಎಂದು ನುಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಸಿ.ಎಚ್. ಸೌಭಾಗ್ಯ , ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ,    ಸದಸ್ಯ ಸಂಚಾಲಕ ಶ್ರೀ ಮೇಟಿ ಮುದಿಯಪ್ಪ , ಶಿಬಿರದ ನಿರ್ದೇಶಕ ಡಾ ಅಪ್ಪಗೆರೆ ಸೋಮಶೇಖರ್   ಹಾಗೂ  ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ ವಿಕ್ಟರ್ ವಿಜಯ್ ಲೋಬೊ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News