ಇಂದು ‘ಸಂಗ್ರಹ ಉತ್ಸವ’ ವಸ್ತು ಪ್ರದರ್ಶನ

Update: 2016-12-15 18:35 GMT

ಮಂಗಳೂರು, ಡಿ.15: ನಗರದ ಉರ್ವಾದಲ್ಲಿರುವ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿ.16ರಂದು ಸಂಗ್ರಹ ಉತ್ಸವ-2016 ಎಂಬ ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ಬೆಳಗ್ಗೆ 9:30ರಿಂದ ಸಂಜೆ 6ರ ತನಕ ನಡೆಯುವ ಈ ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾಕಾರರು ತಯಾರಿಸಿದ ಚಿತ್ರಕಲೆ, ಕಸೂತಿ, ವೈಜ್ಞಾನಿಕ ಮಾದರಿಗಳು ಹಾಗೂ ಔಷಧೀಯ ಗಿಡಗಳ ಪ್ರದರ್ಶನ ಇರಲಿದೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಬಿಷಪ್ ಅ.ವಂ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News