ಇಂದಿನಿಂದ ‘ಮೈಸೂರ್ ಸಿಲ್ಕ್’ ಸೀರೆಗಳ ಪ್ರದರ್ಶನ

Update: 2016-12-19 18:40 GMT

ಉಡುಪಿ, ಡಿ.19: ಕರ್ನಾಟಕ ಸರಕಾರದ ಉದ್ಯಮವಾಗಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ‘ಮೈಸೂರ್ ಸಿಲ್ಕ್’ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಡಿ.20ರಿಂದ 24ರವರೆಗೆ ಜೋಡುಕಟ್ಟೆ ಬಳಿಯ ಡಯನಾ ಹೊಟೇಲ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 11ಗಂಟೆಗೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸುವರು ಎಂದು ನಿಗಮದ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News