ನೀರುಡೆ : ಮುಕ್ತಿ ಪ್ರಕಾಶ್ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ

Update: 2016-12-20 17:40 GMT

ಮೂಡುಬಿದಿರೆ, ಡಿ. 20 : ರಾಜ್ಯದ ಮುಖ್ಯ ಮಂತ್ರಿಗಳು ಬಡವರ ಮಕ್ಕಳಿಗಾಗಿ ಉತ್ತಮ ಸೈಕಲ್‌ಗಳನ್ನು ಒದಗಿಸಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಿ ಬದುಕನ್ನು ಸಾಗಿಸಲು ಹಲವಾರು ಅವಕಾಶಗಳಿವೆ. ಸರಕಾರವು ವಿದ್ಯಾರ್ಥಿಗಳ ಉತ್ತಮ ಬೆಳವಣಿಗೆಗಾಗಿ ಮುಂದಿನ ತಿಂಗಳಿನಿಂದ ವಾರದಲ್ಲಿ 5 ದಿನಗಳ ಕಾಲ ಹಾಲನ್ನು ನೀಡುವ ಮೂಲಕ ಪೂರ್ಣ ಪ್ರಮಾಣದ ಪೌಷ್ಠಿಕ ಆಹಾರವನ್ನು ಒದಗಿಸಲಿದೆ ಎಂದು ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

 ಅವರು ನೀರುಡೆ ಮುಕ್ತಿ ಪ್ರಕಾಶ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಂಗಳವಾರ ಸೈಕಲ್‌ಗಳನ್ನು ವಿತರಿಸಿ ಮಾತನಾಡಿದರು.

 ಧರ್ಮಗುರು, ಶಾಲೆಯ ಸಂಚಾಲಕ ಅಶಿಸ್ ರೆಬೆಲ್ಲೋ ಮಾತನಾಡಿ ಸೈಕಲ್ ಮುಖಾಂತರ ಶರೀರಕ್ಕೆ ಉತ್ತಮ ವ್ಯಾಯಾಮ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯ ಎಂದು ಹೇಳಿದ ಅವರು ಅನುದಾನಿತ ಶಾಲೆಯ ಮಕ್ಕಳಿಗೂ ಸಮವಸ್ತ್ರವನ್ನು ನೀಡುವಂತೆ ಆಗ್ರಹಿಸಿದರು.

ಕಲ್ಲಮುಂಡ್ಕೂರು ತಾ.ಪಂ ಸದಸ್ಯ ಸುಕುಮಾರ್ ಸನಿಲ್, ಕಲ್ಲಮುಂಡ್ಕೂರು ಗ್ರಾ.ಪಂ ಸದಸ್ಯ ಲಾಜರಸ್ ಡಿ"ಕೋಸ್ತ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಜೆಸಿಂತಾ ಉಪಸ್ಥಿತರಿದ್ದರು.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News