ಮೂಳೆ ಖನಿಜಾಂಶ ಸಾಂದ್ರತೆ ಉಚಿತ ತಪಾಸಣಾ ಶಿಬಿರ

Update: 2016-12-21 13:52 GMT

ಉಡುಪಿ, ಡಿ.21: ಆಸ್ಟಿಯೋಪೊರೋಸಿಸ್ ಅಥವಾ ಮೂಳೆ-ಸವಕಳಿ ಎನ್ನುವುದು ಮೂಳೆಗಳು ತೆಳುವಾಗುವ ಹಾಗೂ ನಾಜೂಕಾಗುತ್ತಾ ಹೋಗುವ ಮತ್ತು ಅಂತಿಮವಾಗಿ ಮುರಿದು ಹೋಗುವ ಒಂದು ರೋಗ ಪರಿಸ್ಥಿತಿ. ಶರೀರವು ಹೊಸ ಮೂಳೆಗಳನ್ನು ಉತ್ಪಾದಿಸುವಲ್ಲಿ ವಿಫಲವಾದಾಗ ಅಥವಾ ಹಳೆಯ ಮೂಳೆಗಳಲ್ಲಿ ಮುರಿತಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಉಡುಪಿ, ಡಿ.20: ಆಸ್ಟಿಯೋಪೊರೋಸಿಸ್ ಅಥವಾ ಮೂಳೆ-ಸವಕಳಿ ಎನ್ನುವುದು ಮೂಳೆಗಳು ತೆಳುವಾಗುವ ಹಾಗೂ ನಾಜೂಕಾಗುತ್ತಾ ಹೋಗುವ ಮತ್ತು ಅಂತಿಮವಾಗಿ ಮುರಿದು ಹೋಗುವ ಒಂದು ರೋಗ ಪರಿಸ್ಥಿತಿ. ಶರೀರವು ಹೊಸ ಮೂಳೆಗಳನ್ನು ಉತ್ಪಾದಿಸುವಲ್ಲಿ ವಿಫಲವಾದಾಗ ಅಥವಾ ಹಳೆಯ ಮೂಳೆಗಳಲ್ಲಿ ಮುರಿತಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಹಿರಿಯ ವಯಸ್ಕರ ಮೂಳೆ ಮುರಿತದ ಹೆಚ್ಚಿನ ಪ್ರಕರಣಗಳಲ್ಲಿ ಮೂಳೆ- ಸವಕಳಿಯ ಹಿನ್ನೆಲೆ ಕಾರಣವಾಗಿರುತ್ತದೆ. ಮೂಳೆ-ಸವಕಳಿಗೆ ಸಂಬಂಧಿಸಿದ ಪ್ರತಿಯೊಂದು ಮೂಳೆ ಮುರಿತವೂ ರೋಗಿ ಸಾವೀಗೀಡಾಗುವ ಅಪಾಯವನ್ನು ದುಪ್ಪಟ್ಟುಗೊಳಿಸುತ್ತದೆ. ಮೂಳೆ-ಸವಕಳಿ ಕಾಯಿಲೆಯಿಂದ ಬಳಲುತ್ತಿರುವ 35 ದಶಲಕ್ಷದಷ್ಟು ಜನರು ಭಾರತದಲ್ಲಿ ಇದ್ದಾರೆ. ಋತುಬಂಧವಾಗಿರುವ (ಮುಟ್ಟು ನಿಂತಿರುವ) ಮಹಿಳೆಯರಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ.

 ಈ ನಿಟ್ಟಿನಲ್ಲಿ ಮೂಳೆಯ ಖನಿಜಾಂಶ ಸಾಂದ್ರತೆಯನ್ನು ಉಚಿತವಾಗಿ ಪರೀಕ್ಷಿಸುವ ಶಿಬಿರವೊಂದು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ಮೂಳೆ ರೋಗ ವಿಭಾಗದಲ್ಲಿ ಡಿ.22ರಂದು ಬೆಳಗ್ಗೆ 9ರಿಂದ ಸಂಜೆ 3ರವೆರೆಗೆ ನಡೆಯಲಿದೆ ಎಂದು ಡಾ.ಟಿಎಂಎ ಪೈ ಆಸ್ಪತ್ರೆಯ ಹಂಗಾಮಿ ವೈದ್ಯಕೀಯ ಅಧೀಕ್ಷಕ ಡಾ. ದಿನೇಶ್ ಎಂ ನಾಯಕ್ ತಿಳಿಸಿದ್ದಾರೆ.

40 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಉಚಿತ ಶಿಬಿರದಲ್ಲಿ ಹೆಸರನ್ನು ನೋಂದಾಯಿಸಿಕೊಂಡು ತಮ್ಮ ಮೂಳೆಗಳ ಖನಿಜಾಂಶ ಸಾಂದ್ರತೆ (ಬೋನ್ ಡೆನ್ಸಿಟಿ) ಪರೀಕ್ಷೆ ಮಾಡಿಸಿಕೊಳ್ಳಬಹುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ದೂರವಾಣಿ:0820-2526501, ವಿಸ್ತರಣೆ-2164ನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News