ಮರದಿಂದ ಬಿದ್ದು ಮೃತ್ಯು
Update: 2017-01-03 18:37 GMT
ಉಪ್ಪಿನಂಗಡಿ, ಜ.3: ಇಲ್ಲಿನ ಸಮೀಪದ ಶಿರಾಡಿ ಎಂಬಲ್ಲಿ ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವರದಿಯಾಗಿದೆ.
ದುಗ್ಗಣ್ಣ ಗೌಡ (45)ಮೃತಪಟ್ಟ ವ್ಯಕ್ತಿ. ಶಿರಾಡಿ ಗ್ರಾಮದ ಪಿಜಕ್ಕಳ ಮನೆ ನಿವಾಸಿ ವೆಂಕಪ್ಪಗೌಡ ಎಂಬವರ ಮಗನಾಗಿರುವ ದುಗ್ಗಣ್ಣ ಗೌಡ ತನ್ನ ಮನೆ ಸಮೀಪದ ತೆಂಗಿನ ಮರವನ್ನೇರಿದ ಸಂದಭರ್ದಲ್ಲಿ ಆಕಸ್ಮಿಕವಾಗಿ ಆಯತಪ್ಪಿಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ. ಘಟನೆ ಬಗ್ಗೆ ಸಹೋದರ ಶಿವಪ್ಪಗೌಡ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.