ೆ.7ರಿಂದ ದಡಾರ-ರುಬೆಲ್ಲಾ ಅಭಿಯಾನ

Update: 2017-01-08 18:47 GMT

 ಮಂಗಳೂರು, ಜ.8: ದಡಾರ- ರುಬೆಲ್ಲಾ ರೋಗ ತಡೆಗಟ್ಟಲು ೆ.7ರಿಂದ 28ರವರೆಗೆ ದಡಾರ- ರುಬೆಲ್ಲಾ ಅಭಿಯಾನ ಏರ್ಪಡಿಸಲಾಗಿದೆ.

 ಈ ಕುರಿತು ಪೂರ್ವಭಾವಿ ಸಭೆಯು ಮಂಗಳೂರು ಸಹಾಯಕ ಆಯುಕ್ತ ಎ.ಸಿ. ರೇಣುಕಾ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಡಾರ ರೋಗ ಹಾಗೂ ರುಬೆಲ್ಲಾ ರೋಗ ವೈರಾಣುಗಳ ಮುಖಾಂತರ ಮಕ್ಕಳಿಗೆ ಹರಡುತ್ತದೆ. ಈ ರೋಗ ನಿಯಂತ್ರಣಕ್ಕೆ ಲಸಿಕೆಯನ್ನು ಪಡೆಯಬೇಕು. ರೋಗದಿಂದ ಜ್ವರ, ನೆಗಡಿ, ಕೆಮ್ಮು, ಮೈಮೇಲೆ ಕೆಂಪು ಬಣ್ಣದ ಗುಳ್ಳೆಗಳು ಉಂಟಾಗುತ್ತದೆ. ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಈ ರೋಗ ಮಾರಣಾಂತಿಕ ಆಗಿದ್ದು, ಲಸಿಕೆಯನ್ನು 9 ತಿಂಗಳಿನಿಂದ 15 ವರ್ಷದ ಮಕ್ಕಳಿಗೆ ನೀಡಬೇಕಾಗಿದೆ ಎಂದರು.

ತಾಲೂಕು ಆರೋಗ್ಯಾಕಾರಿ ಡಾ.ನವೀನ್‌ಚಂದ್ರ ಮಾತನಾಡಿ, ಈ ಅಭಿಯಾನದಲ್ಲಿ ಭಾರತ ಸರಕಾರದಿಂದ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು. ಈ ಲಸಿಕೆಯನ್ನು ಪಡೆಯಲು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿಯನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಕಾರಿಗಳು, ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News