ಸಾಣೂರು: ಉಡುಪಿ ಜಿಲ್ಲಾಮಟ್ಟದ ಯುವಜನ ಮೇಳಕ್ಕೆ ಚಾಲನೆ
ಕಾರ್ಕಳ, ಜ.8: ಯುವಕರ ಮನಸ್ಸನ್ನುಅರಳಿಸುವಂತ ಚೈತನ್ಯ ಶಕ್ತಿ ವಿವೇಕಾನಂದ ರಲ್ಲಿತ್ತು. ಹಾಗಾಗಿಯೇ ಅವರು ಯುವಕರು ಮನಸ್ಸು ಮಾಡಿದರೆ ಇಡೀ ದೇಶವೇ ಬದಲಾವಣೆ ಕಾಣುತ್ತದೆ. ನಿಜವಾದ ಸ್ವಾತಂತ್ರ ಲಭಿಸುತ್ತದೆ ಎನ್ನುವ ಸಂದೇಶ ನೀಡಿದ್ದರು. ಯುವ ಜನತೆ ಸೇರಿಕೊಂಡು ಯಾವುದೇ ಹೊಸೆಲಸಗಳನ್ನು ಮಾಡಲಿ ಅವರಿಗೆ ವಿವೇಕಾನಂದರು ಮಾದರಿ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಶನಿವಾರ ಉಡುಪಿ ಜಿಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾಣೂರು ಯುವಕ ಮಂಡಲದ ಆಶ್ರಯದಲ್ಲಿ ಸಾಣೂರು ಸಮಾಜ ಮಂದಿರದ ವಠಾರದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ, ಜಿಲ್ಲಾಮಟ್ಟದ ಯುವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಹಾಗೂ ಸಮುದಾಯದ ಪ್ರಗತಿಯಲ್ಲಿ ಸಲ್ಲಿಸಿರುವ ಅಮೋಘ ಸೇವೆಯನ್ನು ಪರಿಗಣಿಸಿ 2015-16ನೆ ಸಾಲಿನ ಜಿಲ್ಲಾ ಯುವ ಪ್ರಶಸ್ತಿ ವೈಯಕ್ತಿಕ ವಿಭಾಗದಲ್ಲಿ ಮುಟ್ಲುಪಾಡಿ ಅರ್ಧನಾರೀಶ್ವರ ಯುವತಿ ಮಂಡಲದ ಶುೃತಿ ಶೆಟ್ಟಿ ಮತ್ತು ಇನ್ನಂಜೆ ಯುವತಿ ಮಂಡಲದ ಸುಮಲತಾ ಶೇಖರ್‌ರಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಂಕ ವಿಭಾಗದಲ್ಲಿ ಪುತ್ತೂರು ಹನುಮಂತ ನಗರ ಸಹೋದರ ಯುವಕ ಮಂಡಲ, ಹರೆಗೋಡು ಮಹಾವಿಷ್ಣು ಯುವಕ ಮಂಡಲ, ನೀಲಾವರ ಚೈತನ್ಯ ಯುವಕ ಮಂಡಲಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಜಿಲ್ಲಾ ಯುವಜನ ಮೇಳದ ಗೌರವಾಧ್ಯಕ್ಷ ಶ್ರೀರಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಸಾಣೂರು ಗ್ರಾಪಂ ಅಧ್ಯಕ್ಷೆ ಅಕ್ಷತಾ ಶೆಟ್ಟಿ, ಜಿಪಂ ಸದಸ್ಯೆ ದಿವ್ಯಶ್ರೀ ಅಮೀನ್, ತಾಪಂ ಸದಸ್ಯ ಪ್ರವೀಣ್ ಕೋಟ್ಯಾನ್, ರವೀಂದ್ರ ರೈ ಅಬುಧಾಬಿ, ಸಾಣೂರು ಯುವಕ ಮಂಡಲದ ಗೌರವಾಧ್ಯಕ್ಷ ಶಂಕರ ಶೆಟ್ಟಿ, ಅಧ್ಯಕ್ಷ ಪ್ರಕಾಶ್ ಮಡಿವಾಳ, ಕಾರ್ಕಳ ಯುವಜನ ಸೇವಾ ಮತ್ತು ಕ್ರೀಡಾಕಾರಿ ೆಡ್ರಿಕ್, ಕುಂದಾಪುರ ಯುವಜನ ಸೇವಾ ಮತ್ತು ಕ್ರೀಡಾಕಾರಿ ಸುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು.
ಕೆ.ವಿ.ರಮಣ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ವಂದಿಸಿದರು.
ಯುವಜನ ಮೇಳದ ಅಂಗವಾಗಿ ಯುವಕ ಮಂಡಲದ ಕಚೇರಿ ಬಳಿಯಿಂದ ಸಮಾಜ ಮಂದಿರದ ಸಭಾಂಗಣದವರೆಗೆ ಮೆರವಣಿಗೆ ಸಾಗಿಬಂತು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಉಡುಪಿ ನೃತ್ಯ ನಿಕೇತನ ಕೊಡವೂರು ಇದರ ಕಲಾವಿದರಿಂದ ನೃತ್ಯ ವೈಭವ ವಿನೂತನ ಮತ್ತು ವೈಶಿಷ್ಟ ಪೂರ್ಣ ನೃತ್ಯ ಕಾರ್ಯಕ್ರಮ ಜರಗಿತು.