ಎಂಟು ವರ್ಷಗಳಾದರೂ ತಲೆ ಎತ್ತದ ಪಂಪ್‌ವೆಲ್ ‘ಹೊಸ ಬಸ್ ನಿಲ್ದಾಣ’
ಮಂಗಳೂರು, ಜ.10: ನಗರದ ಹಂಪನಕಟ್ಟೆ- ಸ್ಟೇಟ್‌ಬ್ಯಾಂಕ್ ಪರಿಸರದ ಟ್ರಾಫಿಕ್ ಜಾಮ್ ತಗ್ಗಿಸುವ ನಿಟ್ಟಿನಲ್ಲಿ ಪಂಪ್‌ವೆಲ್ ಬಳಿ ನಿರ್ಮಿಸಲು ಉದ್ದೇಶಿಸಲಾದ ಹೊಸ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಬಹು ನಿರೀಕ್ಷಿತ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ 8 ವರ್ಷವಾದರೂ ಕುಂಟುತ್ತಾ ಸಾಗಿದೆ. ಈ ಮಧ್ಯೆ ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ ಮಾಡಬಾರದು ಎಂದು ಖಾಸಗಿ ಬಸ್ ಮಾಲಕರು ಲಾಬಿ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೊಸ ಬಸ್ ನಿಲ್ದಾಣ ಪ್ರಸ್ತಾವ ಇಂದು ನಿನ್ನೆಯದಲ್ಲ. ಭರತ್‌ಲಾಲ್ ಮೀನಾ 1994ರಲ್ಲಿ ದ.ಕ. ಜಿಲ್ಲಾಕಾರಿಯಾಗಿದ್ದಾಗಲೇ ಮಂಗಳೂರಿನ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೊರವಲಯದ ನಾಲ್ಕು ಕಡೆ ಬಸ್ ನಿಲ್ದಾಣ ನಿರ್ಮಿಸಲು ಉತ್ಸುಕರಾಗಿದ್ದರು. ಮಂಗಳೂರಿನಲ್ಲೊಂದು ಸುಸಜ್ಜಿತ ಸಿಟಿ ಬಸ್ ನಿಲ್ದಾಣವೇ ಇಲ್ಲ. ವಿವಿಧ ರೂಟ್‌ಗಳ ಬಸ್‌ಗಳು ಸ್ಟೇಟ್‌ಬ್ಯಾಂಕ್ ಬಳಿಯ ಇಳಿಜಾರು ಪ್ರದೇಶವನ್ನೇ ಬಸ್‌ನಿಲ್ದಾಣವನ್ನಾಗಿ ಮಾಡಿಕೊಂಡಿವೆ. ಹಂಪನಕಟ್ಟೆಯಲ್ಲಿದ್ದ ಸರ್ವಿಸ್ ಬಸ್ ನಿಲ್ದಾಣವನ್ನು 1996-97ರ ಅವಯಲ್ಲಿ ನೆಹರೂ ಮೈದಾನ ಬಳಿಯ ಹಾಕಿ ಮೈದಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಹಂಪನಕಟ್ಟೆಯಲ್ಲಿ ತೆರವಾದ ಸ್ಥಳದಲ್ಲಿ ಬೃಹತ್ ವಾಹನ ಪಾರ್ಕಿಂಗ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು.ರಲ್ಲಿ ಕೃಷ್ಣ ಜೆ.ಪಾಲೆಮಾರ್ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದಾಗ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಭರತ್‌ಲಾಲ್ ನಿಯುಕ್ತಿಗೊಂಡಿದ್ದರು. ಸಿಟಿ ಮತ್ತು ಸರ್ವಿಸ್ ಬಸ್‌ಗಳಿಗೆ ಪಂಪ್‌ವೆಲ್‌ನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾಪಕ್ಕೆ ಆವಾಗಲೇ ಚಾಲನೆ ಸಿಕ್ಕಿತ್ತು. ಸುಮಾರು 12.5 ಎಕರೆ ಜಮೀನನ್ನು ಸ್ವಾೀನಪಡಿಸಿ ಹೊಸ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಪ್ರಸ್ತಾವಿತ ಸ್ಥಳದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣದೊಂದಿಗೆ ಸಿಟಿ ಮತ್ತು ಖಾಸಗಿ ಬಸ್‌ಗಳಿಗೆ ಸುಸಜ್ಜಿತ ನಿಲ್ದಾಣ ನಿರ್ಮಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ಅಲ್ಲಿದ್ದ ಮನೆಗಳನ್ನು ತೆರವುಗೊಳಿಸುವುದು ಮತ್ತು ಜಾಗವನ್ನು ಸಮತಟ್ಟುಗೊಳಿಸುವ ಬಗ್ಗೆ ನಿರ್ಧರಿಸಲಾಯಿತು. ಈ ಕುರಿತು ಅಂದಿನ ಜಿಲ್ಲಾಕಾರಿಗಳು ಮೇಲಿಂದ ಮೇಲೆ ಸಭೆ ನಡೆಸಿದರು. ಕೆಲವು ಜಮೀನನ್ನು ಸ್ವಾೀನಪಡಿಸಿ ಜಾಗವನ್ನು ಸಮತಟ್ಟುಗೊಳಿಸಲಾಯಿತು. ಅದಕ್ಕೆ ಲಕ್ಷಾಂತರ ರೂ. ವ್ಯಯಿಸಲಾಯಿತು. ಆದರೆ ವರ್ಷ ಉರುಳುತ್ತಲೇ ಎಲ್ಲವೂ ಗಾಳಿಯಲ್ಲಿ ತೇಲಾಡಿದಂತಾಯಿತು.
ಬಳಿಕ ಬಂದ ಕಾಂಗ್ರೆಸ್ ಸರಕಾರ, ಸಚಿವರು, ಜಿಲ್ಲಾಕಾರಿಗಳು, ಮನಪಾ ಆಡಳಿತ, ಮನಪಾ ಆಯುಕ್ತರು ಹೀಗೆ ಎಲ್ಲರೂ ಪಂಪ್‌ವೆಲ್ ಬಸ್ ನಿಲ್ದಾಣದ ಬಗ್ಗೆ ‘ಹೇಳಿಕೆ’ಗಳನ್ನು ನೀಡುತ್ತಾ ಬಂದರೇ ವಿನಃ ಕಾರ್ಯರೂಪಕ್ಕೆ ಯಾವುದೂ ಬಂದಂತಿಲ್ಲ. ಆಗಾಗ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸುತ್ತಾ ಬಂದರೂ ನಿರ್ದಿಷ್ಟ ಉತ್ತರವಿಲ್ಲ.ಮಧ್ಯೆ ಹೊಸ ಬಸ್ ನಿಲ್ದಾಣಕ್ಕೆ ಮೀಸಲಿಟ್ಟ ಜಾಗವು ರಾ.ಹೆ.ಗೆ ತಾಗಿಕೊಂಡಿದ್ದು, ಇದರಿಂದ ಅಭಿವೃದ್ಧಿಗೆ ತೊಡಕಾಗಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಮನಪಾ ಆಡಳಿತವು ಹೊಸ ಬಸ್ ನಿಲ್ದಾಣ ನಿರ್ಮಿಸಲು ಆಸಕ್ತಿ ವಹಿಸದಿದ್ದರೆ ಕೆಎಸ್ಸಾರ್ಟಿಸಿ ಇಲ್ಲಿ ಬಸ್ ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಿಸುವ ಪ್ರಸ್ತಾಪವೂ ಇದೆ. ಮಂಗಳೂರು ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಗಾಗ ಹಲವೆಡೆ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಟ್ರಾಫಿಕ್ ಜಾಮ್ ನಿಯಂತ್ರಿಸಲು ‘ನಗರದೊಳಗೆ’ ಸಿಟಿ, ಸರ್ವಿಸ್, ಸರಕಾರಿ ಇತ್ಯಾದಿ ಬಸ್‌ಗಳ ಪ್ರವೇಶ ನಿರ್ಬಂಸುವ ಅಗತ್ಯವಿದೆ. ಮಂಗಳೂರು ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಸಚಿವರು, ಶಾಸಕರು ಸಭೆ-ಸಮಾರಂಭಗಳಲ್ಲಿ ಮೋನೋ ರೈಲು, ಸ್ಕೆಬಸ್ ಇತ್ಯಾದಿ ಬಗ್ಗೆ ಹೇಳುತ್ತಲೇ ಇದ್ದಾರೆ. ಆದರೆ ಮಂಗಳೂರಿಗೆ ಸುಸಜ್ಜಿತ ಬಸ್ ನಿಲ್ದಾಣದ ಬಗ್ಗೆ ಆಸಕ್ತಿ ತೋರಿದಂತಿಲ್ಲ. ಒಟ್ಟಿನಲ್ಲಿ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶಂಕೆ ವ್ಯಕ್ತವಾಗುತ್ತಿವೆ.
ಪಂಪ್‌ವೆಲ್‌ನಲ್ಲಿ ಹೊಸ ಬಸ್ ನಿಲ್ದಾಣಕ್ಕೆ 45 ಕೋ. ರೂ. ಅಂದಾಜು ಪಟ್ಟಿಯ ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಪ್ರಸ್ತಾವಿತ ಜಮೀನಿನ ಮಾಲಕರು- ಬಾಡಿಗೆದಾರರಲ್ಲಿ ಗೊಂದಲವಿದೆ. ಕೆಲವರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನಪಾದ ಅಕಾರಿ ಮತ್ತು ಸಿಬ್ಬಂದಿ ವರ್ಗವನ್ನು ಸ್ಥಳಕ್ಕೆ ಕಳುಹಿಸಿ ಜಮೀನಿನ ಮಾಲಕರ ಲಿಖಿತ ಹೇಳಿಕೆ ಪಡೆಯಲು ಪ್ರಯತ್ನ ಮಾಡಲಾಗಿದೆ. ಆದರೂ ಯಾರೂ ಸಮರ್ಪಕ ಹೇಳಿಕೆಗಳನ್ನು ನೀಡಲು ಮುಂದಾಗುತ್ತಿಲ್ಲ. ಈ ಮಧ್ಯೆ ಹೊಸ ಬಸ್ ನಿಲ್ದಾಣದ ಬಗ್ಗೆ ಸಾಧ್ಯತಾ ವರದಿ ನೀಡಲು ‘ಕೆಯುಐಡಿಎ್ಸಿ’ಗೆ ಕೇಳಿಕೊಳ್ಳಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಜರಗಿಸಲಾಗುವುದು.
<ಮುಹಮ್ಮದ್ ನಝೀರ್, ಮನಪಾ ಆಯುಕ್ತರು.
ಹೊಸ ಬಸ್ ನಿಲ್ದಾಣದಲ್ಲಿ ಲಾಬಿ: ಕಾಮತ್
ವರ್ಷದಿಂದ ವರ್ಷಕ್ಕೆ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಗಲಗೊಂಡ ರಸ್ತೆಗಳ ಇಕ್ಕಡೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿಸಲಾಗುತ್ತಿದೆ. ಇದರಿಂದ ರಸ್ತೆ ಕಿರಿದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೊಸ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಯಾರಿಗೂ ಇಚ್ಛಾಶಕ್ತಿ ಇದ್ದಂತಿಲ್ಲ. ಇದ್ದಿದ್ದರೆ ಯಾವತ್ತೋ ಈ ಬಸ್ ನಿಲ್ದಾಣ ತಲೆ ಎತ್ತುತ್ತಿತ್ತು. ಇದರಲ್ಲಿ ವ್ಯವಸ್ಥಿತ ಲಾಬಿ ಇದೆ. ಅದರಲ್ಲೂ ಬಸ್ ಮಾಲಕರು ಸಚಿವರು, ಶಾಸಕರು, ಅಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಬರುವ ಸಿಟಿ, ಸರ್ವಿಸ್ ಹೀಗೆ ಎಲ್ಲ ಬಸ್‌ಗಳು ಪಂಪ್‌ವೆಲ್ ಹೊಸ ಬಸ್ ನಿಲ್ದಾಣಕ್ಕೆ ಬರಬೇಕು. ಅಲ್ಲಿಂದ ಕಂಕನಾಡಿ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ಗೆ ಪ್ರತ್ಯೇಕ ಸಿಟಿ ಬಸ್‌ಗಳನ್ನು ಓಡಿಸಬೇಕು. ಇದರಿಂದ ನಗರದೊಳಗಿನ ಟ್ರಾಫಿಕ್ ಜಾಮ್ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಸಿಗಬಹುದು. ಇನ್ನು ರಾ.ಹೆ. ಪಕ್ಕ ಬಸ್ ನಿಲ್ದಾಣ ನಿರ್ಮಿಸಿಬಾರದು ಎಂದೇನೂ ಇಲ್ಲ. ಇದು ಕೂಡ ವ್ಯವಸ್ಥಿತ ಷಡ್ಯಂತ್ರ. ಹಾಸನದಲ್ಲಿ ಹೆದ್ದಾರಿ ಪಕ್ಕ ಸರಕಾರಿ ಬಸ್ ನಿಲ್ದಾಣ ಇಲ್ವಾ? ಈ ಬಗ್ಗೆ ಇವರೆಲ್ಲಾ ಏನು ಹೇಳುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪ್ರಶ್ನಿಸಿದರು.