ಕವಿ ಕೆ.ವಿ.ತಿರುಮಲೇಶ್‌ಗೆ ಗೋವಿಂದ ಪೈ ದತ್ತಿ ಪ್ರಶಸ್ತಿ

Update: 2017-02-01 15:36 GMT

ಉಡುಪಿ, ಫೆ.1: ಪ್ರಸಕ್ತ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಕನ್ನಡದ ಖ್ಯಾತ ಕವಿ, ವಿಮರ್ಶಕ, ಕತೆಗಾರ ಡಾ.ಕೆ.ವಿ ತಿರುಮಲೇಶ ಆಯ್ಕೆಯಾಗಿದ್ದಾರೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಹೆರಂಜೆ ಕೃಷ್ಣ ಭಟ್ ತಿಳಿಸಿದ್ದಾರೆ.

ಡಾ. ತಿರುಮಲೇಶ್ ಕನ್ನಡ ಸಾಹಿತ್ಯದ ವಿವಿಧ ವಿಭಾಗಗಳಲ್ಲಿ ಅಪೂರ್ವ ಕೃಷಿ ಮಾಡಿದ್ದು , ಮೂವತ್ತಕ್ಕೂ ಅಧಿಕ ಪಾಂಡಿತ್ಯಪೂರ್ಣ ಕೃತಿಗಳನ್ನು ಪ್ರಕಟಿಸಿದ್ದಾರೆ. ಮುಖವಾಡಗಳು, ವಠಾರ,  ಮಹಾಪ್ರಸ್ಥಾನ,  ಮುಖಾಮುಖಿ, ಅವಧ, ಅರಬ್ಬಿ ಮೊದಲಾದ ಅವರ ಕವನ ಸಂಕಲನಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಅವರು ಅನೇಕ ಮಕ್ಕಳ ಕವಿತೆಗಳನ್ನೂ ಬರೆದಿದ್ದಾರೆ.

ನಾಯಕ ಮತ್ತು ಇತರರು, ಕಳ್ಳಿಗಿಡದ ಹೂ ಇವರ ಕಥಾಸಂಕಲನಗಳು ,  ಕಾವ್ಯಕಾರಣ, ಆಳನಿರಾಳ (1-4 ಸಂಪುಟ) ಸಮೃದ್ಧ ಕನ್ನಡ ಇನ್ನಷ್ಟು ಕನ್ನಡ ಹೀಗೆ ಹತ್ತು ಹಲವು ವಿಮರ್ಶೆ, ಲೇಖನ ಸಂಗ್ರಹ ಅನುವಾದಗಳು ಸೇರಿವೆ. ಸಾಹಿತ್ಯದಲ್ಲಿ ನೆನಪಿಸಬೇಕಾದ ಅವರ ಕೃತಿಗಳಲ್ಲಿ ಆಚೆಬದಿ, ಕಲಾಚೇತನ, ಪೂರ್ವಯಾ, ಬುದ್ಧಿ ಭ್ರಮಣೆ ಮುಖ್ಯವಾದವು.

ಕೇರಳದ ‘ಕುಮಾರನ್ ಆಶಾನ್’ ಪ್ರಶಸ್ತಿ, ಕಾಂತಾವರದ ‘ವರ್ಧಮಾನ’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪುತ್ತೂರಿನ ‘ನಿರಂಜನ’ ಪ್ರಶಸ್ತಿ, ಶಿವಮೊಗ್ಗೆಯ ‘ಹಾಮಾನಾ ಪ್ರಶಸ್ತಿ’, ಮಂಗಳೂರಿನ ‘ಸಂದೇಶ’ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿ, 2016ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಇವರನ್ನು ಅರಸಿ ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News