ನಾಟಕಗಳ ದಾಖಲೀಕರಣ ಇಂದಿನ ಅಗತ್ಯ: ಪ್ರೊ.ಉಪಾಧ್ಯಾಯ

Update: 2017-02-08 14:31 GMT

ಕಾಪು, ಫೆ.7: ಪ್ರತಿಯೊಂದು ನಾಟಕಗಳ ದಾಖಲೀಕರಣ ಕಾರ್ಯ ಆಗ ಬೇಕು. ಇವುಗಳು ಮುಂದಿನ ತಲೆಮಾರಿಗೆ ಸುಲಭವಾಗಿ ದೊರೆಯುವಂತಾಗ ಬೇಕು. ಆದುದರಿಂದ ನಾಟಕ ನಿರ್ದೇಶಕರು ತಮ್ಮತಮ್ಮ ನಾಟಕಗಳನ್ನು ಯೂಟ್ಯೂಬ್, ಅಂತರ್ ಜಾಲಗಳಲ್ಲಿ ಅಪ್‌ಲೋಡ್ ಮಾಡಬೇಕು ಎಂದು ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ಹಿರಿಯಡಕ ಹೇಳಿದ್ದಾರೆ.

ಕಟಪಾಡಿ ಪ್ರೇರಣಾ ಟ್ರಸ್ಟ್ ಹಾಗೂ ಎಸ್‌ವಿಎಸ್ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ಶಾಲಾ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ನಾಟಕೋತ್ಸವ ‘ರಂಜನೋತ್ಸವ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಾಟಕ ಎಂಬುದು ಕೇವಲ ಮನರಂಜನೆ ಅಲ್ಲ. ಅದು ವೈಚಾರಿಕವಾಗಿ ನಮ್ಮನ್ನು ಬೆಳಸುವಂತಿರಬೇಕು. ಆದುದರಿಂದ ಕಲಾವಿದರಾದವರಿಗೆ ಸಾಮಾಜಿಕ ಜವಾಬ್ದಾರಿ ಅತಿ ಅಗತ್ಯ ಎಂದು ಅವರು ತಿಳಿಸಿದರು.

ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನಿವೃತ್ತ ಶಿಕ್ಷಕ ಕುರ್ಕಾಲು ದಿನಕರ ಶೆಟ್ಟಿ, ಮಾಜಿ ಲಯನ್ ಗವರ್ನರ್ ಡಾ.ರವೀಂದ್ರನಾಥ್ ಶೆಟ್ಟಿ, ಪರಿಚಯ ಪಾಂಬೂರು ಅಧ್ಯಕ್ಷ ಅನಿಲ್ ಡೇಸಾ ಶಂಕರಪುರ ಮುಖ್ಯ ಅತಿಥಿಗಳಾಗಿದ್ದರು.ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಸಂತ ಮಾಧವ ಭಟ್ ವಹಿಸಿದ್ದರು.

ಕಟಪಾಡಿ ಗ್ರಾಪಂ ಸದಸ್ಯ ವಿನಯ ಬಲ್ಲಾಳ್, ಉಡುಪಿಯ ಉದ್ಯಮಿ ಪ್ರಪುಲ್ಲಚಂದ್ರ ರಾವ್ ಉಪಸ್ಥಿತರಿದ್ದರು. ಪ್ರೇರಣಾ ಟ್ರಸ್ಟ್‌ನ ನಿರ್ದೇಶಕ ಶ್ರೀಕರ ಅಂಚನ್ ಸ್ವಾಗತಿಸಿದರು. ಸಂಚಾಲಕ ರಾಘವೇಂದ್ರ ರಾವ್ ಮಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಮಲಾ ದಯಾನಂದ್ ವಂದಿಸಿದರು. ನಿವೃತ ಶಿಕ್ಷಕ ಅಪ್ಪುಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಜನಾ ಕಲಾವಿದರು ಕಟಪಾಡಿ ತಂಡದಿಂದ ಜೋಕುಲು ಬಾಲೆಲು ತುಳು ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News