"ನಾ ರಾಧೆಯಲ್ಲ' ಕವನ ಸಂಕಲನ ಬಿಡುಗಡೆ

Update: 2017-03-13 18:34 GMT

ಉಡುಪಿ, ಮಾ.13: ಕಾವ್ಯ ಎನ್ನುವುದು ಸತತ ಅಭ್ಯಾಸ, ಪರಿಶ್ರಮದಿಂದ ಸಿದ್ದಿಸಿರುವುದು. ಸಾಹಿತ್ಯದ ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಕಾವ್ಯವು ಕಡಿಮೆ ಶಬ್ದದಲ್ಲಿ ಹೆಚ್ಚಿನ ಅರ್ಥ ಹೊಮ್ಮಿಸುವ ಮಾಧ್ಯಮ. ಹಾಗಾಗಿ ಕವಿಗೆ ತಂತ್ರದ ಜತೆಗೆ ಅದನ್ನು ಪ್ರಸ್ತುತ ಪಡಿಸುವ ಜ್ಞಾನವು ಸಿದ್ಧಿಸಿದರೆ ಎಲ್ಲರನ್ನು ಸುಲಭವಾಗಿ ತಲುಪಬಹುದು ಎಂದು ಹಿರಿಯ ಪತ್ರಕರ್ತ ನಿತ್ಯಾನಂದ ಪಡ್ರೆ ಹೇಳಿದ್ದಾರೆ.

ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ವತಿಯಿಂದ ಹಿರಿಯಡ್ಕ ಮಾಧವ ಮಂಗಲ ಸಭಾಭವನದಲ್ಲಿ ರವಿವಾರ ನಡೆದ ಉದಯೋನ್ಮುಖ ಲೇಖಕಿ ಚಂದ್ರಿಕಾ ನಾಗರಾಜ್ ಅವರ ಕವನ ಸಂಕಲನ ‘ನಾ ರಾಧೆಯಲ್ಲ’ ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.

ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.

 ಈ ಸಂದಭರ್ ಟ್ರಸ್ಟ್ ವತಿಯಿಂದ ಹಿರಿಯಡಕ ವೀರಭದ್ರ ದೇವಸ್ಥಾನದ ಅವಘಡದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಧನ ವಿತರಿಸಲಾಯಿತು.

ವಿಶ್ರಾಂತ ಪ್ರಾಂಶುಪಾಲ ಡಾ.ಪಾದೆಕಲ್ಲು ವಿಷ್ಣುಭಟ್, ಉಡುಪಿ ತಾಲೂಕು ಕಸಾಪ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಲೇಖಕಿ ವಸಂತಿ ಅಂಬಲಪಾಡಿ, ಚಂದ್ರಿಕಾ ನಾಗರಾಜ್ ಉಪಸ್ಥಿತರಿದ್ದರು. ವೀಣಾ ಸ್ವಾಗತಿಸಿದರು. ತಿಲಕಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News