ಮುಂಬೈಯಲ್ಲಿ ಮೊಂಡಿ ಥರ್ಸ್ ಡೇ ಆಚರಣೆ

Update: 2017-04-14 16:53 GMT

ಮುಂಬೈ, ಎ.14: ಯೇಸು ಕ್ರಿಸ್ತರು ಶಿಲುಬೆಯಲ್ಲಿ ಪ್ರಾಣ ತ್ಯಾಗಗೈಯುವ ಮುನ್ನ ತನ್ನ ಹನ್ನೆರಡು ಪರಮ ಶಿಷ್ಯರ ಪಾದಗಳನ್ನು ತೊಳೆದು ಶುದ್ಧೀಕರಿಸಿದ ಸನ್ನಿವೇಶವನ್ನು ಕ್ರೈಸ್ತ ಜನತೆ ಆಚರಿಸಿದರು.

ಮಂಗಳೂರು ಮೂಲದ ಮುಂಬೈ ಧರ್ಮ ಪ್ರಾಂತ್ಯದ ಬಿಷಪ್ ಡಾ.ರೆ. ಪರ್ಸಿವಲ್ ಜೆ. ಇ ಫೆರ್ನಾಂಡಿಸ್, ಖಾರ್ ಪಶ್ಚಿಮದ ಖಾರ್ ದಾಂಡದಲ್ಲಿನ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಇಗರ್ಜಿಯ ಅನಭಿಜ್ಞ ಜನರ (ಶಿಷ್ಯರ) ಪಾದಗಳನ್ನು ತೊಳೆದು ಪ್ರಾರ್ಥನೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಚರ್ಚ್‌ನ ಪ್ರಧಾನ ಗುರು ರೆ.ಫಾ. ಮಿಲ್ಟನ್ ಗೊನ್ಸಾಲಿಸ್, ಸಹಾಯ ಗುರು ಫಾ ವಿನಯ್ ರೊಡ್ರಿಗಾಸ್ ಮತ್ತು ಫಾ. ಝೇವಿಯರ್ ಪಿಂಟೊ ಮತ್ತಿತರರು ಪೂಜಾವಿಧಿಗಳಲ್ಲಿ ಪಾಲ್ಗೊಂಡರು.

Writer - ರೋನ್ಸ್ ಬಂಟ್ವಾಳ್

contributor

Editor - ರೋನ್ಸ್ ಬಂಟ್ವಾಳ್

contributor

Similar News