ದ.ಕ. ಜಿಲ್ಲೆಯ 7 ಮಂದಿ ಆಯ್ಕೆ
Update: 2017-04-23 18:32 GMT
ಮಂಗಳೂರು, ಎ.23: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (ಕೆಪಿಎಸ್ಸಿ) ಗೆಜೆಟೆಡ್ ಪ್ರೊಬೆಷನರಿಯ 2014ನೆ ಸಾಲಿನ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ 7ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕೆಪಿಎಸ್ಸಿಯ 464 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಅದರಲ್ಲಿ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಯತೀಶ್ ಉಳ್ಳಾಲ (ಸಹಾಯಕ ಆಯುಕ್ತ), ಸುಳ್ಯದ ಅಜಿತ್ ಎಂ. (ಸಹಾಯಕ ಆಯುಕ್ತ), ಸುಮನಾ ಬಿ.(ಡಿವೈಎಸ್ಪಿ). ರಶ್ಮಿ ಎಸ್.ಆರ್.(ತಹಶೀಲ್ದಾರ್), ಮಿಶೆಲ್ ಕ್ವೀನಿ ಡಿಕೋಸ್ತಾ (ತಹಶೀಲ್ದಾರ್), ಗಾಯತ್ರಿ ಸಿ.ಎಚ್.(ತಾಲೂಕು ಸಮಾಜ ಕಲ್ಯಾಣಾಧಿಕಾರಿ), ಮಹೇಶ್ ಕುಮಾರ್ ಹೊಳ್ಳ(ಸಹಾಯಕ ಜೈಲು ಅಧೀಕ್ಷಕ) ಆಯ್ಕೆಯಾಗಿದ್ದಾರೆ.