ಅನಕ್ಷರಸ್ಥರಿಂದ ಜಾನಪದ ಶ್ರೀಮಂತಿಕೆ ಉಳಿವು: ಕೃಷ್ಣಮೂರ್ತಿ ಹನೂರು

Update: 2017-05-21 11:31 GMT

ಉಡುಪಿ, ಮೇ 21: ದಕ್ಷಿಣ ಹಾಗೂ ಉತ್ತರ ಕರ್ನಾಟಕದಲ್ಲಿ ಅಪಾರ ಜಾನಪದ ಶ್ರೀಮಂತಿಕೆ ಇದೆ. ಅನಕ್ಷರಸ್ಥರು ತಮ್ಮ ಜಾನಪದ ಶ್ರೀಮಂತಿಕೆಯನ್ನು ಉಳಿಸುವ ಪ್ರಯತ್ನ ಮಾಡಿದರೆ, ಅಕ್ಷರಸ್ಥರು ಅದರ ಅರಿವೇ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ವಿಷಾಧ ವ್ಯಕ್ತಪಡಿಸಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಪುರುಷೋತ್ತಮ ಬಿಳಿಮಲೆಯವರಿಗೆ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿ ದ್ದರು.

ಅವಿಭಜಿತ ದ.ಕ. ಜಿಲ್ಲೆಯು ಎಲ್ಲ ರೀತಿಯಲ್ಲಿ ಪ್ರಗತಿ ಹಾಗೂ ಬೆಳವಣಿಗೆ ಜೊತೆಗೆ ಇಲ್ಲಿನ ಜಾನಪದವನ್ನು ಕೂಡ ಕಾಪಾಡಿಕೊಂಡು ಬರುತ್ತಿದೆ. ಜಾನ ಪದವನ್ನು ಉಳಿಸಿಕೊಳ್ಳಬೇಕೆಂಬ ಎಚ್ಚರವು ಇಲ್ಲಿನ ಜನತೆ ಇದೆ ಎಂದ ಅವರು, ನಾವು ಟಿವಿ ಮಾಧ್ಯಮಗಳ 15ನಿಮಿಷಗಳ ಮನರಂಜನೆಗಾಗಿ ಸಾವಿರಾರು ವರ್ಷಗಳ ಸಾಂಸ್ಕೃತಿಕತೆಯನ್ನು ದೂರ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನ ಚಿಂತಕ ಎಂ.ಪ್ರಭಾಕರ ಜೋಶಿ ಮಾತನಾಡಿ, ಈ ದೇಶ ಕಂಡ ಅತ್ಯಂತ ಪ್ರಮುಖ ಗದ್ಯ ಲೇಖಕ ಹಾಗೂ ಜಾನಪದ ವಿದ್ವಾಂಸರಲ್ಲಿ ಬಿಳಿಮಲೆ ಕೂಡ ಒಬ್ಬರು. ಇವರು ಎಲ್ಲ ವಿಷಯಗಳ ಶಿಕ್ಷಕ ಹಾಗೂ ಕನ್ನಡತನದ ರಾಯಭಾರಿ ಎಂದು ತಿಳಿಸಿದರು.ಪ್ರತಿಯೊಂದು ದೇಶದಲ್ಲಿ ವೇದ, ಪುರಾಣ, ಕಲೆ, ಜಾನಪದ ಸೇರಿದಂತೆ ವಿವಿಧ ಜ್ಞಾನದ ಆಕೃತಿಗಳಿವೆ. ಈ ಪ್ರಾಚೀನ ಜ್ಞಾನದ ಆಕೃತಿಗಳನ್ನು ಯಾವ ರೀತಿ ಉಳಿಸಿಕೊಳ್ಳಬೇಕೆಂಬುದು ನಮ್ಮ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ. ಇವುಗಳ ಪರಿಷ್ಕರಣೆ ಆಗಬೇಕಾಗಿದೆ. ಈ ಮೂಲಕ ಭಾರತವನ್ನು ಜ್ಞಾನ ಪ್ರಧಾನ ದೇಶವನ್ನಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿದರು. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಯಕ್ಷಗಾನ ಬಯ ಲಾಟ ಅಕಾಡೆಮಿಯ ಸದಸ್ಯ ಕಿಶನ್ ಹೆಗ್ಡೆ, ಕಲಾರಂಗದ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿದ್ದರು.

ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಬಯಲು ಸೀಮೆಯ ಬಯ ಲಾಟ- ಕರಾವಳಿಯ ಯಕ್ಷಗಾನ ಅಂತಃಸಂಬಂಧಗಳು’ ವಿಷಯದ ಕುರಿತು ಕೃಷ್ಣಮೂರ್ತಿ ಹನೂರು ಮತ್ತು ಪುರುಷೋತ್ತಮ ಬಿಳಿಮಲೆ ಅವರಿಂದ ಮಾತು ಕತೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News