ಸುಬ್ರಹ್ಮಣ್ಯ, ಸುಳ್ಯದಲ್ಲಿ ಸಿಡಿಲಿನ ಅಬ್ಬರ: ಹಲವು ಮನೆಗಳಿಗೆ, ಕುಕ್ಕೆ ದೇವಳದ ಗೋಪುರಕ್ಕೆ ಹಾನಿ
ಸುಬ್ರಹ್ಮಣ್ಯ, ಮೇ 21: ಕಳೆದೆರಡು ದಿನ ಗಳಿಂದ ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಸಿಡಿಲು, ಮಿಂಚಿನ ಅಬ್ಬರ ಜೋರಾಗಿದೆ. ರವಿವಾರ ಬೆಳಗ್ಗಿನ ಜಾವ ಅಪ್ಪಳಿಸಿದ ಸಿಡಿಲಿಗೆ ಹಲವು ಮನೆಗಳು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಅಲ್ಪಪ್ರಮಾಣದ ಹಾನಿಯಾಗಿದೆ.
ಈ ಭಾಗದಲ್ಲಿ ಏಕಕಾಲದಲ್ಲಿ ಅಪ್ಪಳಿ ಸಿದ ಸಿಡಿಲಿನ ತೀವ್ರತೆಗೆ ನಾಲ್ಕೂರು ಗ್ರಾಮದ ಮರಕತ ನಿವಾಸಿ ವಾರಿಜಾ ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಛಾವಣಿ ಸಂಪೂರ್ಣ ಕುಸಿ ದಿದ್ದು, ಹೆಂಚುಗಳೆಲ್ಲವೂ ನುಚ್ಚುನೂರಾಗಿವೆ. ಸಿಡಿಲಬ್ಬರಕ್ಕೆ ಮನೆಯ ಕಿಟಕಿ ಬಾಗಿಲುಗಳು ಕಿತ್ತುಹೋಗಿವೆ. ವಿದ್ಯುತ್ ವಯರಿಂಗ್ ಹಾನಿಗೀಡಾಗಿದೆ. ಇದೇ ವೇಳೆ ಮನೆಯೊಳಗೆ ನಿದ್ರಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುತ್ತಿಗಾರಿನ ಮುತ್ತಪ್ಪನಗರದಲ್ಲಿ ನೀಲಪ್ಪಎಂಬವರ ಮನೆಗೂ ಸಿಡಿಲು ಬಡಿದಿದ್ದು, ಅಪಾರ ಹಾನಿ ಸಂಭವಿಸಿದೆ. ಈ ವೇಳೆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯ ಯಗೊಂಡಿದ್ದರಿಂದ ಸಂಭಾವ್ಯ ಭಾರೀ ಅವಘಡ ತಪ್ಪಿದೆ.
ಸುಬ್ರಹ್ಮಣ್ಯ ದೂರವಾಣಿ ಕೇಂದ್ರದ ಮೊಬೈಲ್ ಗೋಪುರಕ್ಕೂ ಸಿಡಿಲು ಬಡಿದಿದೆ. ಇದರಿಂದ ರವಿವಾರ ಮಧ್ಯಾಹ್ನದ ತನಕ ಮೊಬೈಲ್ ಫೋನ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು. ಇದೇವೇಳೆ ಸುರಿದ ಮಳೆಯಿಂದ ರಸ್ತೆಗಳು ಕೆಸರಿನಿಂದ ಆವೃತಗೊಂಡು ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು.
ಸುಳ್ಯ: 2 ಮನೆ, ಅಂಗಡಿಗೆ ಹಾನಿ
ಸುಳ್ಯ ವರದಿ: ಇಂದು ಮುಂಜಾೆ ತಾಲೂಕಿನಾದ್ಯಂತ ಭಾರೀ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಹಲ ವೆಡೆ ಹಾನಿ ಸಂಭವಿಸಿದೆ.
ಗುತ್ತಿಗಾರು ಪೇಟೆಯ ಸಮೀಪ ನೀಲಪ್ಪಎಂಬವರ ಮನೆ ಸಿಡಿಲಿನಿಂದ ಹಾನಿಗೊಂಡಿದೆ. ಅಲ್ಲೇ ಪಕ್ಕದ ಅಂಗಡಿ ಹಾಗೂ ನಾಲ್ಕೂರು ಸಮೀಪ ಮನೆ ಯೊಂದು ಸಿಡಿಲಿನ ಹೊಡೆತಕ್ಕೆ ಸಿಲುಕಿ ಹಾನಿಯಾಗಿದೆ. ಮನೆಮಂದಿ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಹಲವೆಡೆ ವಿದ್ಯುತ್ ಉಪ ಕರಣಗಳು ಹಾನಿಗೊಂಡಿವೆ.