ಸಾ್ವವಲಂಬನೆಗಾಗಿ ಐಟಿಐ ಶಿಕ್ಷಣ
ಮಂಗಳೂರು, ಮೇ 24: ತೋಕೂರಿನ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯು ಕೈಗಾರಿಕಾ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ಪೂರ್ಣ ವೃತ್ತಿ ತರಬೇತಿ ನೀಡುತ್ತಾ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಗಳ ಮುಖಾಂತರ ಗುರುತಿಸಿಕೊಂಡಿದೆ.
1984ರಲ್ಲಿ ಮುಲ್ಕಿಯಲ್ಲಿ ಪ್ರಾರಂಭ ಗೊಂಡ ಈ ಸಂಸ್ಥೆಯು 2005ರಿಂದ ತೋಕೂರಿನ ತಪೋವನದ ಹಸಿರುಭರಿತ ನೈಸರ್ಗಿಕ ಪರಿಸರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಿಂದ ಕೂಡಿದ ವಿಶಾಲ ಕಾರ್ಯಾಗಾರ, ಅನುಭವಿ ಅಧ್ಯಾಪಕ ವರ್ಗ, ಉತ್ತಮ ಮೂಲಭೂತ ಸೌಕರ್ಯಗಳಿಂದ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ ಸುಮಾರು ಮೂರು ಸಾವಿರಕೂ ್ಕಅಧಿಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ನೀಡಿದೆ.
ಪ್ರತಿಷ್ಠಿತ ನಿಟ್ಟೆ ವಿದ್ಯಾಸಂಸ್ಥೆಯ ಆಡಳಿತಕ್ಕೊಳಪಟ್ಟ ಈ ಸಂಸ್ಥೆಯು ಭಾರತ ಸರಕಾರದ ಕಾರ್ಮಿಕ ಇಲಾಖೆಯ ಮುಖಾಂತರ ರಾಷ್ಟ್ರೀಯ ವೃತ್ತಿ ಪರಿಷತ್ತಿನ ಶಾಶ್ವತ ಸಂಯೋಜನೆ ಪಡೆದಿದೆ. ಕರ್ನಾಟಕ ಸರಕಾರದ ಅನುದಾನದೊಂದಿಗೆ ಇದೀಗ ಭಾರತ ಸರಕಾರದ ರಾಷ್ಟ್ರೀಯ ಗುಣ ನಿಯಂತ್ರಣ ಮಂಡಳಿಯಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮಾನ್ಯತೆ ಗಳಿಸಿದೆ.
ಸಂಸ್ಥೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಂ.ಆರ್.ಪೂಂಜಾ ಟ್ರಸ್ಟ್ ಮತ್ತು ಇನ್ನಿತರ ದಾನಿಗಳಿಂದ ಪ್ರತೀ ವರ್ಷ ಒಂದು ಲಕ್ಷಕ್ಕಿಂತಲೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ, ಅಲ್ಲದೆ ಸರಕಾರದ ವಿವಿಧ ಇಲಾಖೆಗಳಿಂದ ಕೊಡಮಾಡುವ ಶುಲ್ಕ ವಿನಾಯಿತಿ ಸೌಲಭ್ಯ ಪಡೆಯುವ ಅವಕಾಶವಿದೆ.
ವ್ಯಕ್ತಿತ್ವ ವಿಕಸನಕ್ಕಾಗಿ ಪ್ರಾಯೋಗಿಕ ತಾಂತ್ರಿಕ ತರಬೇತಿಯ ಜೊತೆಗೆ ಯೋಗ, ಪ್ರಾಣಾಯಾಮ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್, ಸಂಹವನಕ್ಕೆ ಅಗತ್ಯವಾಗಿರುವ ‘ಸ್ಪೋಕನ್ ಇಂಗ್ಲಿಷ್ ತರಬೇತಿ’, ‘ಕಂಪ್ಯೂಟರ್‌ತರಬೇತಿ’, ಕ್ರೀಡೆಗಳನ್ನು ಪಠ್ಯಕ್ರಮದೊಂದಿಗೆ ಅಳ ವಡಿಸಲಾಗಿದೆ. ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಸಂದರ್ಶನಕ್ಕೆ ಅವಕಾಶ ನೀಡುವುದು ಕೈಗಾರಿಕಾ ಉತ್ಪನ್ನಗಳು, ಮಾರಾಟ, ಗುಣ ನಿಯಂತ್ರಣ, ಯಂತ್ರೋಪಕರಣಗಳ ದುರಸ್ತಿ, ಸುರಕ್ಷತೆ ಮತ್ತು ಸ್ವಉದ್ಯೋಗವನ್ನು ಪ್ರಾರಂಭಿ ಸುವುದಾದಲ್ಲಿ ಯೋಜನಾ ವರದಿ ತಯಾರಿಕೆ ಮುಂತಾದ ವಿಷಯಯಗಳ ಬಗ್ಗೆ ಅಧ್ಯಯನ ನಡೆಸಿ ಜೊತೆಗೆ ಮಾಹಿತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಬಾರಿ ಡಿಜಿಟಲ್ ಟ್ರೈನಿಂಗ್ ಮೂಲಕ ತರಬೇತಿ ನೀಡಲಾಗುವುದು.
ತರಬೇತಿಯ ಅವಧಿಯಲ್ಲಿ ಸಾಮಾಜಿಕ ಬದ್ಧತೆಯ ಬಗ್ಗೆ ವಿವಿಧ ಕೈಗಾರಿಕಾ ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾತ್ಯಕ್ಷಿಕೆಗಳ ಮತ್ತು ವಿಶೇಷ ಉಪನ್ಯಾಸಗಳಿಂದ ಮಾಹಿತಿ ಪಡೆದು ತರಬೇತಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಯೊಬ್ಬ ಪರಿಪೂರ್ಣ ಕುಶಲಕರ್ಮಿಯಾಗಿ ಮೂಡಿ ಬರುವ ತಾಂತ್ರಿಕ ತರಬೇತಿ ಶಿಕ್ಷಣವನ್ನು ಪಡೆದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಪರಿಣಿತ ತಂತ್ರಜ್ಞನಾಗಿ ಉತ್ತಮ ಉದ್ಯೋಗ ಪಡೆಯುವ ಸುವರ್ಣ ಅವಕಾಶ ಇಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಪ್ರಾಚಾರ್ಯರನ್ನು (082-2297696) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.