ಕಲ್ಮಿಂಜ: ನೂತನ ರಸ್ತೆಗೆ ಶಿಲಾನ್ಯಾಸ

Update: 2017-05-26 12:14 GMT

ಕೊಣಾಜೆ, ಮೇ 26: ನರಿಂಗಾನ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ ಪುಂಡಿಕಾ, ಕೊಡಂಚಿಲ್‌ನಿಂದ ಕಲ್ಮಿಂಜ ಸಂಪರ್ಕಿಸುವ ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನಡೆಯಿತು.

ಸ್ಥಳೀಯರಾದ ಕರುಣಾಕರ್ ಶೆಟ್ಟಿ ಪುಂಡಿಕಾ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ನರಿಂಗಾನ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ಲಾ ಕೊಡಂಚಿಲ್ ಮಾತನಾಡಿ ನೂತನ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ತಮ್ಮ ಮೌಲ್ಯಯುತ ಜಮೀನು ನೀಡಿದ್ದರಿಂದ ರಸ್ತೆ ನಿರ್ಮಾಣ ಕಾರ್ಯ ಸಹಕಾರಿಯಾಗಲಿದ್ದು, ವಿದ್ಯಾನಗರ ಪುಂಡಿಕಾ, ಕೊಡಂಚಿಲ್ ನಾಗರಿಕರು ಕಲ್ಮಿಂಜ ತೌಡುಗೋಳಿ ಪ್ರದೇಶಕ್ಕೆ ಬರಬೇಕಾದರೆ 7.ಕಿ.ಮೀ ಬೇಕಾಗಿತ್ತು. ನೂತನ ಸಂಪರ್ಕ ರಸ್ತೆ ನಿರ್ಮಾಣವಾದರೆ ಕೇವಲ 1ಕಿ.ಮೀ. ದೂರ ಕ್ರಮಿಸಲು ಸಾಧ್ಯವಿದ್ದು, ನೂತನ ರಸ್ತೆ ನಿರ್ಮಾಣಕ್ಕೆ ಸ್ಥಳೀಯರೇ ಹಣ ನೀಡುವುದರಿಂದ ಊರಿನ ಜನರ ಶ್ರಮ ಈ ರಸ್ತೆಯಲ್ಲಿದೆ ಎಂದರು.

ಈ ಸಂದರ್ಭ ಪ್ರಕಾಶ್ ಶೆಟ್ಟಿ ಮರಿಕ್ಕಳ, ಇದ್ದೀನ್‌ ಕುಂಞ ಕೊಡಂಚಿಲ್, ಸತ್ಯನಾರಾಯಣ ಭಟ್, ಇದ್ದೀನ್ ಕುಂಞಿ ಪುಂಡಿಕಾ, ಅಶ್ರಫ್ ಪುಂಡಿಕಾ, ರಾಜೇಶ್, ಹಸನ್ ಕುಂಞಿ ಹೂವೆದಪದವು, ರಮೇಶ್ ಬೆದ್ರಳಿಕೆ, ಅಬ್ಬಾಸ್ ಕೊಡಂಚಿಲ್, ಮುಹಮ್ಮದ್ ಮದನಿ ಪುಂಡಿಕಾ, ಅಬ್ಬಾಸ್ ಸಖಾಫಿ ಕೊಡಂಚಿಲ್, ಚಂದ್ರಶೇಕರ್ ಶೆಟ್ಟಿ ಮರಿಕ್ಕಳ, ಇಸ್ಮಾಯಿಲ್ ಕೊಡಂಚಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News