ಗೋ ಹತ್ಯೆ ನಿಷೇಧ ಅಧ್ಯಾದೇಶ
Update: 2017-05-26 18:37 GMT
ಉಡುಪಿ, ಮೇ 26: ದೇಶಾದ್ಯಂತ ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೊಳಿಸುವ ಕೇಂದ್ರ ಸರಕಾರದ ಆದೇಶವನ್ನು ಉಡುಪಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.
‘ಕೇಂದ್ರ ಸರಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಆದರೆ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಪೂರ್ವಾಪರ ತಿಳಿಯದೆ ನಿರಪರಾಗಳ ಹತ್ಯೆ, ಹಲ್ಲೆಯತ್ನ ನಡೆಯಬಾರದು’ ಎಂದು ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು.
ಸರಕಾರ ಕಾನೂನನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಕೆಲ ವರು ಆವೇಶದಿಂದ ವರ್ತಿಸುತ್ತಾರೆ. ಇದು ಅನಾಹುತಕ್ಕೆ ಕಾರಣವಾಗುತ್ತದೆ. ಆದು ದರಿಂದ ಕಾನೂನು ಅಂಗೀಕಾರಗೊಂಡರೆ ಸಾಲದು ಅದು ಸಮರ್ಪಕವಾಗಿ ಜಾರಿ ಯಾಗಬೇಕು. ಆದರೆ ಕಾನೂನಿನ ದುರುಪಯೋಗ ಸಲ್ಲದು ಎಂದು ಅವರು ಹೇಳಿದರು.