ಕೋಟೆಕಾರ್: ಆಧಾರ್ ಕೇಂದ್ರ ಉದ್ಘಾಟನೆ
ಉಳ್ಳಾಲ, ಜೂ.6: ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಹಾಗೂ ಕೋಟೆಕಾರ್‌ನ ಜನಸಾಮಾನ್ಯರಿಗೆ ಉಪಯೋಗುವ ನಿಟ್ಟಿನಲ್ಲಿ ಆಧಾರ್ ಕೇಂದ್ರವನ್ನು ಕೋಟೆಕಾರ್ ಪೆಟ್ರೋಲ್ ಪಂಪ್ ಹತ್ತಿರದ ನೂರ್ ಮಹಲ್ ಬಿಲ್ಡಿಂಗ್‌ನಲ್ಲಿ ತೆರೆಯಲಾಗಿದ್ದು, ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ್ ಚಾಲನೆ ನೀಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರ್, ಸೋಮೇಶ್ವರ ಗ್ರಾಮ ಪಂಚಾಯತ್ ವಿರೋಧ ಪಕ್ಷದ ನಾಯಕ ದೀಪಕ್ ಪಿಲಾರ್, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ರಮೇಶ್ ಕೊಲ್ಯ, ಸೋಮೇಶ್ವರ ವಲಯ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಕೊಳಂಗರೆ, ಮಂಗಳೂರು ವಿಧಾನ ಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಪವನ್ ರಾಜ್ ಕೊಲ್ಯ, ಕೋಟೆಕಾರ್ ಪಂಚಾಯತ್ ಮಾಜಿ ಸದಸ್ಯ ರಾಜ್ ಮೋಹನ್ ಮುದ್ಯ, ಉಳ್ಳಾಲ ನಗರ ಸಭೆ ಸದಸ್ಯ ಬಾಝಿಲ್ ಡಿಸೋಜ, ನಾಮ ನಿರ್ದೇಶಕ ಸದಸ್ಯ ರವಿ ಗಾಂಧಿನಗರ,ಕಾಂಗ್ರೆಸ್ ಮುಖಂಡ ಪಿಯೂಸ್ ಮೋಂತೆರೋ, ಸೋಮೇಶ್ವರ ಪಂಚಾಯತ್ ಸದಸ್ಯ ಇಸ್ಮಾಯಿಲ್, ಮಾದವ ಗಟ್ಟಿ ಉಪಸ್ಥಿತರಿದ್ದರು.