ಮಂಗಳೂರು: ಪಿಎಫ್‌ಐಯಿಂದ ಪುಸ್ತಕ ವಿತರಣೆ

Update: 2017-06-07 04:44 GMT

ಮಂಗಳೂರು, ಜೂ.7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಶಾಖೆಯ ವತಿಯಿಂದ ಮಂಗಳೂರು, ಮಾಡೂರು, ಬಜ್ಪೆ, ಪೆರ್ಮುದೆ, ಮಲಾರ್, ಕಲಾಯಿ, ಮೂಡುಬಿದಿರೆ ಪ್ರದೇಶದ ಎರಡನೆ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಸುಮಾರು 372 ಅರ್ಹ ವಿದ್ಯಾರ್ಥಿಗಳಿಗೆ 1.80 ಲಕ್ಷ ರೂ. ವೌಲ್ಯದ ಪುಸ್ತಕ, ಬ್ಯಾಗ್ ಮತ್ತು ಶಾಲಾ ಅಗತ್ಯ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳ ಮನೆ ಹಾಗೂ ಶಾಲೆಗಳಿಗೆ ತೆರಳಿ ವಿತರಿಸಲಾಗಿದೆ.

‘ಸ್ಕೂಲ್ ಚಲೋ-2017’ರ ಕಾರ್ಯಕ್ರಮವನ್ನು ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News