ಒತ್ತಿನೆಣೆಯಲ್ಲಿ ಗುಡ್ಡ ಕುಸಿತ: ಐದು ತಾಸು ಹೆದ್ದಾರಿ ಬಂದ್

Update: 2017-06-07 06:21 GMT

ಬೈಂದೂರು, ಜೂ.7: ಗುಡ್ಡ ಕುಸಿದ ಪರಿಣಾಮ ಸುಮಾರು ಐದು ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡ ಘಟನೆ ಇಲ್ಲಿನ ಒತ್ತಿನೆಣೆ ಬಳಿ ಬುಧವಾರ ನಸುಕಿನ 4.30ರ ವೇಳೆ ನಡೆದಿದೆ.

ಈ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕೊರೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಈ ಗುಡ್ಡ ರಸ್ತೆ ಮೇಲೆ ಕುದಿದೆ. ಇದರಿಂದಾಗಿ ಬೆಳಗ್ಗಿನಿಂದ ನೂರಾರು ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು.

ತೆರವು ಕಾರ್ಯಾಚರಣೆ ವಿಳಂಬ
ಗುಡ್ಡವು ಮುಂಜಾನೆ 4:30ಕ್ಕೆ ಕುಸಿದಿದ್ದರೂ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು 7:30ರ ಸುಮಾರಿಗೆ. ಭಾರೀ ಪ್ರಮಾಣದಲ್ಲಿ ಹೆದ್ದಾರಿಯಲ್ಲಿ ಹರಡಿಕೊಂಡಿದ್ದ ಮಣ್ಣನ್ನು ತೆರವುಗೊಳಿಸಲು 3 ಜೆಸಿಬಿಗಳನ್ನು ಬಳಸಲಾಗಿತ್ತು. ಇದರಿಂದ ತೆರವು ಕಾರ್ಯಾಚರಣೆ ಎರಡು ಗಂಟೆಗಳ ನಡೆಯಿತು. ಇದರಿಂದ ಭಟ್ಕಳ ಕಡೆಯಿಂದ ಬರುತ್ತಿರುವ ಮತ್ತು ತೆರಳುತ್ತಿರುವ ಬಸ್ಗಳು ಸೇರಿದಂತೆ ನೂರಾರು ವಾಹನಗಳ ಸವಾರರು ಪರದಾಡಬೇಕಾಯಿತು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News