ಪ್ರೊ.ಗೋವಿಂದರಾಜ್‌ಗೆ ಸೇಡಿಯಾಪು ಪ್ರಶಸ್ತಿ ಪ್ರದಾನ

Update: 2017-06-08 18:19 GMT

ಉಡುಪಿ, ಜೂ.8: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಹಿರಿಯ ಲೇಖಕ ಮತ್ತು ವಿಮರ್ಶಕ ಪ್ರೊ.ಗಿರಡ್ಡಿ ಗೋವಿಂದರಾಜ್‌ರಿಗೆ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ಯನ್ನು ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರಡ್ಡಿ ಗೋವಿಂದರಾಜ್, ಕರಾವಳಿಯಲ್ಲಿ ಸಾಹಿತ್ಯ ಪರಿಸರ ಎಂಬುದು ಯಕ್ಷಗಾನ ಪರಿಸರ. ಈ ಕಲೆಯು ಗ್ರಾಮೀಣ ಭಾಗದಲ್ಲೂ ವಿಸ್ತರಿಸಿಕೊಂಡಿದೆ. ಹೀಗಾಗಿ ಯಕ್ಷಗಾನದ ಮೂಲಕ ಸಾಕಷ್ಟು ಜ್ಞಾನವನ್ನು ಸಂಪಾದಿಸಿಕೊಳ್ಳಲಾಗುತ್ತದೆ. ಇಂದು ನಾವು ಪರಿಭಾಷಿಕ ಭಾಷೆಗಳನ್ನು ಕಳೆದುಕೊಂಡಿದ್ದೇವೆ. ಅದರ ಬಗ್ಗೆ ಚರ್ಚೆಯೇ ನಡೆಸುತ್ತಿಲ್ಲ ಎಂದರು.

ಸಂಸ್ಕೃತಿ ಚಿಂತಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಪ್ರೊ.ತಾಳ್ತಜೆ ವಸಂತಕುಮಾರ್ ಅಭಿನಂದನಾ ಉಪನ್ಯಾಸ ಮಾಡಿದರು. ಮಣಿಪಾಲ ಅಕಾಡಮಿ ಆ್ ಜನರಲ್ ಎಜುಕೇಶನ್‌ನ ಆಡಳಿತಾಕಾರಿ ಡಾ.ಎಚ್.ಶಾಂತರಾಮ್ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರದ ಸಂಯೋಜನಾಕಾರಿ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜನಾಕಾರಿ ಡಾ.ಅಶೋಕ್ ಆಳ್ವ ವಂದಿಸಿದರು. ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಉಡುಪಿ ಸಮೂಹ ಕಲಾವಿದ ರಿಂದ ಸೇಡಿಯಾಪು ಕಥನ- ಕವನ ‘ಪುಣ್ಯಲಹರಿ’ ಆಧರಿಸಿದ ನೃತ್ಯರೂಪಕ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News