ಉಳ್ಳಾಲ ಕಡಲ್ಕೊರತಕ್ಕೆ ‘ಶಾಶ್ವತ ಪರಿಹಾರ’
- ಮೊದಲ ಹಂತದ ಕಾಮಗಾರಿ ಶೇ.95 ಪೂರ್ಣ
- 6 ಬರ್ಮ್ ಅಳವಡಿಕೆ
- ಹೆಚ್ಚುವರಿ 6 ಬರ್ಮ್‌ಗಳಿಗೆ ಪ್ರಸ್ತಾವ
ಮಂಗಳೂರು, ಜೂ.8: ಕಳೆದ 33 ವರ್ಷಗಳಿಂದ ಉಳ್ಳಾಲವನ್ನು ಕಾಡುತ್ತಿರುವ ಕಡಲ್ಕೊರೆತ ಸಮಸ್ಯೆಗೆ ‘ಶಾಶ್ವತ ಪರಿಹಾರ’ ಎಂಬ ನಿಟ್ಟಿನಲ್ಲಿ ಎಡಿಬಿ ಯೋಜ ನೆಯ 223 ಕೋಟಿ ರೂ. ವೆಚ್ಚದ ಕಾಮಗಾರಿ ಶೇ.95 ಪೂರ್ಣಗೊಂಡಿದೆ. ಈ ಯೋಜನೆಯಲ್ಲಿ ನಾಲ್ಕು ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಉಳ್ಳಾಲ ಅಳಿವೆಬಾಗಿಲಿನ ಹಳೆಯ ಬ್ರೇಕ್‌ವಾಟರ್‌ನ ಮರು ನಿರ್ಮಾಣ ಮತ್ತು ನಿರ್ವಹಣೆ, ಉಳ್ಳಾಲದಲ್ಲಿ ಜಿಯೋಟೆಕ್ ಟೈಲ್‌ನ ಮರಳು ಚೀಲಗಳಲ್ಲಿ 4 ಇನ್‌ಶೋರ್ ಬರ್ಮ್ ಮತ್ತು ಸಮುದ್ರದಲ್ಲಿ 2 ಹ್ಾ ಶೋರ್ ರ್ೀ ಗೋಡೆ ನಿರ್ಮಾಣ ಹಾಗೂ ಮರಳು ಸಮತಟ್ಟು ಈ ಯೋಜನೆಯಲ್ಲಿ ಒಳಗೊಂಡಿದೆ. 2011ರಲ್ಲಿ ರೂಪುಗೊಂಡು 2013ರಲ್ಲಿ ಆರಂಭಗೊಂಡ ಈ ಕಾಮಗಾರಿ 2016ರ ಆರ್ಥಿಕ ವರ್ಷಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ, ವರ್ಷದ ಬಳಿಕ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮೊತ್ತದ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲಾಗುವುದು. ಸ್ಯಾಂಡ್ ನರಿಶ್‌ಮೆಂಟ್ ಅಂದರೆ ಮರಳನ್ನು ಸಮತಟ್ಟುಗೊಳಿಸುವ ಪ್ರಕ್ರಿಯೆ ಆರಂಭಿಸಿಲ್ಲ. ಅದನ್ನು ಕೂಡ ಶೀಘ್ರ ಮಾಡಲಾಗುವುದು. ಉಳಿದಂತೆ 6 ಕಡೆ ಕಡಲ್ಕೊರೆತ ತೀವ್ರವಾಗಿರುವ ಸ್ಥಳವನ್ನು ಗುರುತಿಸಲಾಗಿದ್ದು, ಅಲ್ಲಿಗೆ ಬರ್ಮ್ ಅಳವಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಎಡಿಬಿ ಯೋಜನೆಯ ಅೀಕ್ಷಕ ಇಂಜಿನಿ ಯರ್ ಗೋಪಾಲ ನಾಯ್ಕಾ ಹೇಳಿದ್ದಾರೆ.
ಬ್ರೇಕ್ ವಾಟರರ ನಿರ್ವಹಣೆಯ ಕಾಮಗಾರಿ ಯನ್ನು ಅರ್ಜುನ್ ಅರ್ತ್ ಮೂವರ್ಸ್, ಇನ್‌ಶೋರ್ ಬರ್ಮ್ ನಿರ್ಮಾಣ ಕಾಮಗಾರಿಯನ್ನು ಕೊಚ್ಚಿನ್‌ನ ಆರ್‌ಡಿಎಸ್ ಕಂಪೆನಿಗೆ, ಹ್ಾಶೋರ್ ರ್ೀ ಕಾಮಗಾರಿಯನ್ನು ಹೈದರಾಬಾದ್‌ನ ಧರ್ತಿ ಡ್ರೆಜ್ಜಿಂಗ್ ಕಂಪೆನಿಗೆ ನೀಡಲಾಗಿದೆ. ಸಮುದ್ರ ತಟದಿಂದ 700 ಮೀ. ದೂರದಲ್ಲಿ ಹ್ಾ ಶೋರ್ ರ್ೀ ನಿರ್ಮಿಸಲಾಗುತ್ತದೆ. ಸಮುದ್ರ ತಳದಿಂದ 7.5ಮೀ. ಎತ್ತರಕ್ಕೆ ಗೋಡೆಯಂತೆ ನಿರ್ಮಿಸಲಾಗುತ್ತದೆ. ಈ ಎಲ್ಲ ಕಾಮಗಾರಿ ಮುಗಿದ ಬಳಿಕ ಕಡಲ್ಕೊರತಕ್ಕೆ ಶಾಶ್ವತ ಪರಿಹಾರ ಸಿಕ್ಕೀತು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರಿ ಅಕಾರಿಗಳು, ಇಂಜಿನಿಯರ್‌ಗಳು ಇಂತಹ ಹೊಸ ಹೊಸ ಪೈಲೆಟ್ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದರೂ ಸ್ಥಳೀಯರು, ಮೀನುಗಾರರು ಮಾತ್ರ ಇದೆಲ್ಲಾ ಗಗನಕುಸುಮ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಉಳ್ಳಾಲದಲ್ಲಿ ಕಡಲ್ಕೊರೆತ ತಡೆಯಲು ಅಸಾಧ್ಯ. ಅಂತಹ ಪ್ರಯತ್ನ ಮಾಡಿದರೆ ಅದು ಪ್ರಕೃತಿಯೊಂದಿಗೆ ಯುದ್ಧಕ್ಕೆ ಇಳಿದಂತೆ. ಕಳೆದ 33 ವರ್ಷದಲ್ಲಿ ಸಮುದ್ರ ಅಂದಾಜು 3-4 ಕಿ.ಮೀ.ನಷ್ಟು ಮುಂದೆ ಬಂದಿದೆ. ನೂರಾರು ಮನೆಗಳನ್ನು ಆಹುತಿ ಪಡೆದಿದೆ. ಕಡಲ್ಕೊರೆತ ತಡೆಯಲು ತಟಕ್ಕೆ ಎಷ್ಟೇ ಲೋಡು ಬಂಡೆ ಕಲ್ಲು ಸುರಿದರೂ ಅದು ಸಮುದ್ರ ಪಾಲಾಗಿದೆ. ಮುಂದೆಯೂ ಆಗಲಿದೆ. ಸದ್ಯ ಎಡಿಬಿಯ ‘ಪೈಲೆಟ್ ಯೋಜನೆ’ ಯಶಸ್ವಿಯಾದರೆ ಸ್ಥಳೀಯರ ಭಾಗ್ಯ ಎನ್ನಬಹುದು. ಇಲ್ಲದಿದ್ದರೆ ಬಂಡೆ ಕಲ್ಲಿನ ಜೊತೆ ನಾವೂ ನಮ್ಮ ಆಸ್ತಿಯೂ ಕಡಲಿನ ಪಾಲಾಗಬೇಕಾದೀತು ಎಂದು ಹೇಳುತ್ತಾರೆ.
*1984ರಲ್ಲಿ ಸಣ್ಣ ಪ್ರಮಾಣದಲ್ಲಿ ಕರಾವಳಿ ತೀರದ ಉಳ್ಳಾಲ, ಹೊಸಬೆಟ್ಟು, ಮುಕ್ಕ, ಸಸಿಹಿತ್ಲು ಪ್ರದೇಶದಲ್ಲಿ ಕಡಲ್ಕೊರೆತ ಆರಂಭಗೊಂಡಿತ್ತು. ತೀವ್ರತೆ ಹೆಚ್ಚುತ್ತಲೇ ಸಣ್ಣ ನೀರಾವರಿ ಇಲಾಖೆಯ ನಿರ್ವಹಣೆಯೊಂದಿಗೆ ಕಡಲ್ಕೊರೆತ ತಡೆಗೆ ಕಲ್ಲು ಮತ್ತು ಮರಳು ತುಂಬಿದ ಚೀಲವನ್ನು ಕಡಲ ತಟಕ್ಕೆ ಹಾಕಲಾಗುತ್ತಿತ್ತು. 2001ರ ವೇಳೆಗೆ ಬಂದರು ಇಲಾಖೆಗೆ ಇದರ ನಿರ್ವಹಣೆಯ ಜವಾಬ್ದಾರಿ ಹೊರಿಸಲಾಗಿತ್ತು. ಉಳ್ಳಾಲದಲ್ಲಿ ಕಡಲ್ಕೊರೆತದ ಜೊತೆಗೆ ಜನರ ರೋಧನ, ಅಸಹಾಯಕತೆಯೂ ಮುಂದುವರಿಯಿತು. ತನ್ಮಧ್ಯೆ ಮುಖ್ಯಮಂತ್ರಿ, ಸಚಿವರು, ಶಾಸಕರು, ಅಕಾರಿಗಳು, ತಜ್ಞರ ಭೇಟಿ, ಪರಿಶೀಲನೆ, ಭರವಸೆಯೊಂದಿಗೆ ಕಡಲಿಗೆ ಕಲ್ಲು ಹಾಕುವ ಕೆಲಸವೂ ಭರದಿಂದ ಸಾಗಿತು. ಜತೆಗೆ ಸಚಿವರ ವಿದೇಶಿ ಅಧ್ಯಯನ ಪ್ರವಾಸ, ಕೇರಳ ಮಾದರಿ, ್ರಾನ್ಸ್ ಮಾದರಿ, ‘ಟಿ’ ಮಾದರಿಯ ಬ್ರೇಕ್‌ವಾಟರ್, ತಾಂತ್ರಿಕ ತಜ್ಞರಿಂದ ಸಮೀಕ್ಷೆ, ... ಹೀಗೆ ಹಲವು ಪ್ರಯೋಗ, ಚಿಂತನೆಯೂ ನಡೆಯಿತು.
ಜನರ ಅಹವಾಲು, ರೋಧನೆಯ ಮಧ್ಯೆ ಕಡಲಿಗೆ ಕಲ್ಲು ಹಾಕುವ ಪ್ರಯೋಗಕ್ಕೆ ಮಾತ್ರ ಕತ್ತರಿ ಬೀಳಲಿಲ್ಲ. ಕೋಟ್ಯಂತರ ರೂ. ಕಡಲಿನ ಪಾಲಾಯಿತೇ ವಿನಃ ಸಂತ್ರಸ್ತರ ಮುಖದಲ್ಲಿ ನಗು ಕಾಣಿಸಲಿಲ್ಲ.
‘ನಾವಿಲ್ಲಿ ಪಡುವ ಪಾಡು ಯಾರಿಗೂ ಬೇಡ. ಪ್ರತೀ ಮಳೆಗಾಲದಲ್ಲಿ ನಮಗೆ ಕಡಲ್ಕೊರೆತದ್ದೇ ಸಮಸ್ಯೆ. ಹಸಿದರೂ ಊಟ-ತಿಂಡಿ ತಿನ್ನಲಾಗದ ಸ್ಥಿತಿ ನಮ್ಮದು. ಸರಿಯಾದ ಕೆಲಸವಿಲ್ಲದ ಕಾರಣ ಮನೆಯಲ್ಲಿ ಆಹಾರ ಸಾಮಗ್ರಿಗೂ ಕೊರತೆಯಿದೆ. ಕಡಲ್ಕೊರೆತ ಶುರುವಾದೊಡನೆ ಎಲ್ಲರೂ ಇಲ್ಲಿಗೆ ಬಂದು ಭರವಸೆ ನೀಡಿ ಹೋಗುತ್ತಾರೆ. ಗಂಜಿಕೇಂದ್ರ ತೆರೆಯುತ್ತಾರೆ. ಆದರೆ ನಾವು ಕಡಲ ತೆರೆಯನ್ನು ನೋಡಿ ಆತಂಕದ ಕ್ಷಣಗಳನ್ನು ಕಳೆಯಬೇಕು. ಒಟ್ಟಿನಲ್ಲಿ ನಮ್ಮನ್ನು ಕೇಳುವವರೇ ಇಲ್ಲ...’ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಾರೆ.
‘ನಮ್ಮ ಮನೆ, ಮಸೀದಿ, ಅಂಗಡಿ, ಮದ್ರಸ, ಶೌಚಾಲಯ, ಬಾವಿ, ರಸ್ತೆ, ವಿದ್ಯುತ್ ಕಂಬ, ತೆಂಗಿನ ಮರ ಎಲ್ಲವೂ ಕಡಲಿನ ಪಾಲಾಗಿದೆ. ಮನೆ, ಅಂಗಡಿ ಯೊಳಗಿದ್ದ ಸಾಮಗ್ರಿ ಕೂಡ ಕಡಲಿನ ಪಾಲಾಗಿದೆ. ಸಮಸ್ಯೆ ಎಲ್ಲಿಗೆ ಮುಟ್ಟಿದೆ ಅಂದರೆ ಕಡಲ ತೀರದ ನಮ್ಮ ಹೆಣ್ಮಕ್ಕಳನ್ನು ಮದುವೆಯಾಗಲು ಯುವಕರೂ ಮುಂದೆ ಬರುತ್ತಿಲ್ಲ’ ಎಂದು ಮಹಿಳೆಯೊಬ್ಬರು ದುಃಖದಿಂದಲೇ ಹೇಳಿದರು.
‘ಈ ‘ಶಾಶ್ವತ ಪರಿಹಾರ’ ಎಂಬುದು ಬರೀ ಮರೀಚಿಕೆಯಷ್ಟೆ. ಕಡಲಿಗೆ ಕಲ್ಲು ಹಾಕುವುದರಿಂದ ಇಂಜಿನಿಯರ್‌ಗಳಿಗೆ, ಗುತ್ತಿಗೆದಾರರಿಗೆ ಲಾಭವಾಗುತ್ತದೆಯೇ ವಿನಃ ನಮಗೇನೂ ಲಾಭವಿಲ್ಲ. ನಮಗೆ ಬೇರೆ ಎಲ್ಲಾದರೊಂದು ಕಡೆ ವಸತಿ ವ್ಯವಸ್ಥೆ ಮಾಡಿದರೆ ಉಪಕಾರವಾದೀತು’ ಎಂದು ಹಿರಿಯ ವ್ಯಕ್ತಿಯೊಬ್ಬರು ಅಭಿಪ್ರಾಯಪಟ್ಟರು.
‘ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರು, ಶಾಸಕರು, ಅಕಾರಿಗಳು, ಇಂಜಿನಿಯರ್ ಹೀಗೆ ಎಲ್ಲರೂ ಪ್ರತಿವರ್ಷ ಇಲ್ಲಿಗೆ ಬಂದು ಆಶ್ವಾಸನೆ ನೀಡುತ್ತಾರೆ. ನಮಗೆಲ್ಲಾ ಅದೊಂದು ‘ನಾಟಕ’ದ ದೃಶ್ಯದಂತೆ ಕಾಣುತ್ತದೆ. ಯಾರು ಬಂದರೂ ಇಷ್ಟೇ ಅಂತ ಅನಿಸುತ್ತಿವೆ’ ಎಂದು ಸಂತ್ರಸ್ತರೊಬ್ಬರು ನುಡಿದರು.
ಕರಾವಳಿ ಕರ್ನಾಟಕದ ಕಡಲ ತೀರದ ಕೆಲವು ಕಡೆ ಪ್ರತೀ ವರ್ಷ ಕಾಣಿಸಿ ಕೊಳ್ಳುವ ಕಡಲ್ಕೊರೆತ ತಡೆಗೆ ಎಡಿಬಿ ಯೋಜನೆಯ ನೆರವಿನೊಂದಿಗೆ 2011ರಲ್ಲಿ ರೂಪಿಸಲಾದ 911 ಕೋಟಿ (198 ಮಿಲಿಯನ್ ಡಾಲರ್) ರೂ. ಮೊತ್ತದ ಈ ಯೋಜನೆಯ ಕಾಮಗಾರಿಯು 2018ಕ್ಕೆ ಮುಗಿಯಬೇಕು. ಆದರೆ ಎಲ್ಲ ಕಾಮಗಾರಿ ವರ್ಷದೊಳಗೆ ಮುಗಿಯುವ ಸಾಧ್ಯತೆ ಇಲ್ಲ.
2010ರಲ್ಲೇ ಜಿಯೋಟೆಕ್ ಟೈಲ್ ಬ್ಯಾಗ್ ಮಾದರಿಯ ಕಾಮಗಾರಿಗೆ ಕೇಂದ್ರ ಪರಿಸರ ಇಲಾಖೆಯು ಅನುಮತಿ ನೀಡಿತ್ತು. ಕಾಮಗಾರಿಯು 2018ರಲ್ಲಿ ಮುಗಿಸುವ ಷರತ್ತು ವಿಸಲಾಗಿತ್ತು. 2012ರಲ್ಲಿ ಜಿಯೋಟೆಕ್ ಟೈಲ್ ಬ್ಯಾಗ್ ಮಾದರಿಯನ್ನು ಸ್ವಲ್ಪ ಮಾರ್ಪಾಟು ಮಾಡಿ ಕಲ್ಲುಬಂಡೆ ಹಾಕಿ ಕಾಂಕ್ರೀಟ್‌ನಿಂದ ನಿರ್ಮಿಸಿದ ಟೆಟ್ರಾಪಾಡ್ ಆರ್ಮರ್‌ಗಳ ಬಳಕೆಗೂ ಆದ್ಯತೆ ನೀಡಲಾಗಿತ್ತು. ಆದರೆ ಅದೂ ಪೂರ್ಣಗೊಳ್ಳುವ ಬಗ್ಗೆ ಅನುಮಾನವಿದೆ.
ಉಳ್ಳಾಲ ಕಡಲ್ಕೊರೆತದ ಇತಿಹಾಸ
ಕಡಲ್ಕೊರೆತ ಎಂದಾಕ್ಷಣ ಎಲ್ಲರ ಕಣ್ಣು ಉಳ್ಳಾಲದತ್ತ ಹಾಯುತ್ತದೆ. ಕಡಲ್ಕೊರೆತಕ್ಕೂ ಉಳ್ಳಾಲಕ್ಕೂ ಅವಿನಾಭಾವ ಸಂಬಂಧವಿದೆ ಎಂದರೂ ತಪ್ಪಾಗ ಲಾರದು. ಕಡಲ್ಕೊರೆತಕ್ಕೆ ಸಂಬಂಸಿದಂತೆ ಉಳ್ಳಾಲ ಮಂಡಲ ಪಂಚಾಯತ್, ನಗರ ಪಂಚಾಯತ್, ಪುರಸಭೆಯ ಸದಸ್ಯರಾಗಿದ್ದ ಎ.ಕೆ.ಮುಹಿಯುದ್ದೀನ್ ಹಾಜಿ ಎಂಬವರು 2014ರಲ್ಲೇ ‘ಉಳ್ಳಾಲ ಸಮುದ್ರ ಕೊರೆತ 1984-2014’ ಎಂಬ ಕೃತಿಯನ್ನು ರಚಿಸಿದ್ದರು. ಮುಹಿಯುದ್ದೀನ್ ದಾಖಲಿಸುವ ಪ್ರಕಾರ 1984ರ ಜೂ.13ರಂದು ಉಳ್ಳಾಲದಲ್ಲಿ ಮೊದಲ ಬಾರಿಗೆ ಕಡಲ್ಕೊರೆತ ಸಂಭವಿಸಿತು. ಅದೂ ರಮಝಾನ್‌ನಲ್ಲಿ. ಪಶ್ಚಿಮ ಕರಾವಳಿಯಲ್ಲಿ ಬೀಸಿದ ಬಿರುಗಾಳಿ, ಮಳೆಯ ಜೊತೆಗೆ ಕಡಲ ಅಲೆಗಳು ಅಬ್ಬರಿಸತೊಡಗಿತು. ಸತತ ಮೂರು ದಿನಗಳ ಕಾಲ ಸುರಿದ ಮಳೆಗೆ ‘ಉಳ್ಳಾಲ’ ಬಸವಳಿದಿತ್ತು. ಅಲ್ಲದೆ 35 ಕುಟುಂಬಗಳಿಗೆ ಸ್ಥಳೀಯ ಟಿಪ್ಪು ಸುಲ್ತಾನ್ ಉರ್ದು ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿತ್ತು.
1984ರ ಜುಲೈ 1ರಂದು ರಮಝಾನ್ ಹಬ್ಬವಾದರೂ ಉಳ್ಳಾಲದಲ್ಲಿ ವೌನ ಆವರಿಸಿತ್ತು. ಸ್ಥಳೀಯರ ಮನವಿಯ ಮೇರೆಗೆ ಜುಲೈ 24, 1984ರಂದು ಅಂದಿನ ಕೇಂದ್ರ ಸಚಿವ ಜನಾರ್ದನ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.
1987ರಲ್ಲಿ 31 ಕುಟುಂಬವನ್ನು ನರಿಂಗಾನ ಗ್ರಾಮಕ್ಕೂ, 1989ರಲ್ಲಿ 26 ಕುಟುಂಬವನ್ನು ಉಳ್ಳಾಲ ಧರ್ಮನಗರಕ್ಕೂ 1996ರಲ್ಲಿ ಮನೆ ಕಳಕೊಂಡವರಿಗೆ ಮಂಜನಾಡಿ-ತೌಡುಗೋಳಿಯ ನೆತ್ತಿಲಪದವಿಗೂ, 2001ರಲ್ಲಿ ಕೋಟೆಪುರದ ಕುಟುಂಬವನ್ನು ಬೆಳ್ಮ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಕಡಲ್ಕೊರೆತದ ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮಾಡಲು ಸಮಿತಿಯನ್ನು ರಚನೆ ಯಾಯಿತು. ಈ ಸಮಿತಿಯು ಮುಖ್ಯಮಂತ್ರಿ, ಸಚಿವರು, ಅಕಾರಿಗಳನ್ನು ಭೇಟಿ ಮಾಡು ಮನವಿ ಸಲ್ಲಿಸುತ್ತಲೇ ಬಂತು. ದ.ಕ. ಜಿಲ್ಲಾಕಾರಿ ಕಚೇರಿ ಮುಂದೆ ಧರಣಿಯನ್ನೂ ನಡೆಸಿ ಗಮನ ಸೆಳೆದಿತ್ತು. ಜುಲೈ 3, 2006ರಂದು ‘ಉಳ್ಳಾಲ ಅಳಿಸಿ ಆಂದೋಲನ’ ಸಭೆ ನಡೆಯಿತು ಎಂದು ಈ ಕೃತಿ ಉಲ್ಲೇಖಿಸಿದೆ.