ಟ್ಯಾಲೆಂಟ್ ವತಿಯಿಂದ ಸ್ನೇಹದೀಪಾ ಸಂಸ್ಥೆಯಲ್ಲಿ ಪುಸ್ತಕ ವಿತರಣೆ
Update: 2017-06-10 10:43 GMT
ಮಂಗಳೂರು, ಜೂ. 10: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮಂಗಳೂರು ನಗರದ ಕೊಟ್ಟಾರ ಕ್ರಾಸ್‌ನಲ್ಲಿ ಕಾರ್ಯಾಚರಿಸುತ್ತಿರುವ 'ಸ್ನೇಹಾ ದೀಪಾ' ಸಂಸ್ಥೆಯ ವಿದ್ಯಾರ್ಥಿನಿಯರಿಗೆ ಬರೆಯುವ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಇಂದಿರಾ ಆಸ್ಪತ್ರೆಯ ಮುಖ್ಯಸ್ಥ ಡಾ. ಸೈಯದ್ ನಿಝಾಮುದ್ದೀನ್, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಪ್ಲಾಮಾ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಪಿ.ಎಂ.ಎ. ರಝಾಕ್, ಉದ್ಯಮಿ ರ್ಯಾಂಬೋ ಡಿಸೋಜ, ನಂಡೆ ಪೆಂಙಳ್ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಟಿ.ಆರ್.ಎಫ್. ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಅಧ್ಯಕ್ಷ ರಿಯಾರ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು, ಸದಸ್ಯ ಅಸ್ಲಂ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು.
ಟಿ.ಆರ್.ಎಫ್. ಸಲಹೆಗಾರ ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ನೇಹಾದೀಪಾದ ನಿರ್ದೇಶಕಿ ತಬಸ್ಸುಮ್ ವಂದಿಸಿದರು.