ಪಾತೂರು: ರಮಝಾನ್ ಸಂದೇಶ, ಕ್ವಿಟ್ ವಿತರಣೆ
Update: 2017-06-11 12:10 GMT
ಕೊಣಾಜೆ, ಜೂ.11: ರಮಝಾನ್ ಉಪವಾಸದ ಸಮಯದಲ್ಲಿ ಬಡವರಿಗೆ ನೀಡುವ ದಾನಕ್ಕೆ ಬಹಳಷ್ಟು ಮಹತ್ವ ಇದೆ. ಎಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮ ಏರ್ಪಡಿಸಿದರೆ ಅದು ಯಶಸ್ವಿ ಕಾಣಲು ಸಾಧ್ಯ ಎಂದು ಎಸ್.ವೈ.ಎಸ್ ಕಾಸರಗೋಡು ಜಿಲಾ ಉಪಾಧ್ಯಕ್ಷ ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ ಹೇಳಿದರು.
ಸಮಸ್ತ ಕೇರಳ ಸುನ್ನೀ ಯುವಜನ ಸಂಘ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಆಶ್ರಯದಲ್ಲಿ ಬದಿಮಾಲೆ ಪಾತೂರಿನಲ್ಲಿ ರಮಝಾನ್ ಪ್ರಯುಕ್ತ ನಡೆದ ರಮಝಾನ್ ಸಂದೇಶ ಮತ್ತು ಕ್ವಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ವೈಎಸ್ ಬಾಕ್ರಬೈಲ್ ಸರ್ಕಿಲ್ ಸಮಿತಿಯ ಉಪಾಧ್ಯಕ್ಷ ಶರೀಫ್ ಸಅದಿ ನೆರವೇರಿಸಿದರು. ಪಾತೂರು ಮಸೀದಿ ಖತೀಬ್ ಅಬೂಬಕರ್ ಸಿದ್ದೀಕ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ವೈಎಸ್ ಬಾಕ್ರಬೈಲ್ ಸಕಿಲ್ ಕಾರ್ಯದರ್ಶಿ ರಫೀಕ್ ಲತೀಫಿ ಸ್ವಾಗತಿಸಿದರು. ಮಹಮ್ಮದ್ ಸಖಫಿ ವಂದಿಸಿದರು.