ಆಯುಷ್. ಆರ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ಸಾಧನೆ
Update: 2017-06-15 12:56 GMT
ಮೂಡುಬಿದಿರೆ,ಜೂ.15: ಪ್ರಕೃತಿ ಸಮೂಹ ಸಂಸ್ಥೆಯಲ್ಲಿ 7ನೇ ತರಗತಿ ಒದುತ್ತಿರುವ ಆಯುಷ್ ಆರ್. ಶೆಟ್ಟಿಯವರು ಮೇ 27ರಿಂದ 30 ರವರೆಗಿನ ಟ್ಯಾಲೆಂಟ್ ಹಂಟ್ ಅಕಾಡೆಮಿ ವತಿಯಿಂದ ಜರುಗಿದ, 13ರ ವಯೋಮಿತಿಯೊಳಗಿನ ಶ್ರೀಚಕ್ರ ಸಬ್ ಜೂನಿಯರ್ ಸ್ಟೇಟ್ ರ್ಯಾಂಕಿಂಗ್ ಟೂರ್ನಮೆಂಟ್‌ನ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ.
ಜೂನ್ 5 ರಿಂದ 10ರ ವರೆಗೆ ನಡೆದ ಪ್ರಕಾಶ್ ಪಡುಕೋಣೆ ಸ್ಟೇಟ್ ಮ್ಯಾನೇಜ್‌ಮೆಂಟ್ ಸ್ಟೇಟ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪ್ರಥಮ ಸ್ಥಾನಿಯಾಗಿದ್ದರು.
ರಾಮಪ್ರಕಾಶ್ ಶೆಟ್ಟಿ ಹಾಗೂ ಶಾಲ್ಮಿಲಿ ಆರ್ ಶೆಟ್ಟಿ ದಂಪತಿಗಳ ಹೆಮ್ಮೆಯ ಪುತ್ರನಾದ ಈತ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಇದುವರೆಗೆ ಸತತವಾಗಿ 7 ಬಾರಿ ರಾಜ್ಯ ಮಟ್ಟದ ಪ್ರಥಮ ರ್ಯಾಂಕ್ ಗಳಿಸಿ ದಾಖಲೆ ನಿರ್ಮಿಸಿದ್ದಾನೆ.