ವಿವಾಹಿತ ನಾಪತ್ತೆ

Update: 2017-06-20 14:09 GMT

ಮಂಗಳೂರು, ಜೂ.20: ಕದ್ರಿ ಠಾಣಾ ವ್ಯಾಪ್ತಿಯ ಪ್ರದೀಪ್ ಪೂಜಾರಿ (30) ಎಂಬವರು ಜೂ.17ರಂದು ಪೂಂಜಾಲಕಟ್ಟೆಯಲ್ಲಿರುವ ತನ್ನ ಚಿಕ್ಕಮ್ಮನ ಮಗನಿಂದ 5 ಸಾವಿರ ರೂ. ಸಾಲ ಪಡೆದು ಬಳಿಕ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

ಬಂದರ್ ದಕ್ಕೆಯಲ್ಲಿ ಐಸ್‌ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ್ ಪೂಜಾರಿ ಜೂ.17ರಂದು ಬೆಳಗ್ಗೆ 9:30ಕ್ಕೆ ಮನೆಯಿಂದ ಹೊರಟು ಹಣ ಸಾಲ ಪಡೆದು ಅಲ್ಲಿಂದ ಮರಳಿದವರು ಮನೆಗೆ ಬಂದಿಲ್ಲ ಎಂದು ದೂರಲ್ಲಿ ತಿಳಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News