ಸಿಡಿಲು ಬಡಿದು ಮನೆಗೆ ಹಾನಿ, ಓರ್ವನಿಗೆ ಗಾಯ
Update: 2017-06-20 14:59 GMT
ಪುತ್ತೂರು,ಜೂ.20: ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾದ ಘಟನೆ ಮಂಗಳವಾರ ಸಂಜೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ನಡೆದಿದ್ದು, ಸುಮಾರು 1 ಲಕ್ಷ ಹಾನಿಯಾಗಿದೆ.
ಪುತ್ತೂರು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅವರ ತಂದೆ ನಾರಾಯಣ ಪೂಜಾರಿ ಎಂಬವರ ಮನೆ ಹಾನಿಗೊಳಗಾಗಿದ್ದು, ಮನೆಯ ವಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಹಾನಿಯಾಗಿದೆ. ಸಿಡಿಲಿನ ಅಬ್ಬರಕ್ಕೆ ಮನೆಯ ವಯರಿಂಗ್ ಹೋದ ಕಡೆಗಳಲ್ಲಿ ಗೋಡೆಗಳು ಕುಸಿದು ಬಿದ್ದಿದೆ.
ಈ ಸಂದರ್ಭದಲ್ಲಿ ಮನೆಯೊಳಗಿದ್ದ ನಾರಾಯಣ ಪೂಜಾರಿ ಅವರ ಮೊಮ್ಮಗ ವಿಜೇತ್ ಕುಮಾರ್(17) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಗ್ರಾಮದ ಉಗ್ರಾಣಿ ಉಮೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.