ಶೀಘ್ರದಲ್ಲಿ ಮಂಗಳೂರಿನಲ್ಲೂ 'ಇಂದಿರಾ ಕ್ಯಾಂಟೀನ್ '
Update: 2017-06-26 16:11 GMT
ಮಂಗಳೂರು, ಜೂ. 26: ರಾಜ್ಯದಲ್ಲಿ ಕಡಿಮೆ ದರದಲ್ಲಿ ಊಟ ತಿಂಡಿ ಪೂರೈಸುವ ಸರಕಾರದ ಮಹತ್ವಾ ಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಗರದಲ್ಲೂ ಎರಡನೆ ಹಂತದಲ್ಲಿ ಆರಂಭವಾಗಲಿದೆ ಎಂದು ಸರಕಾರದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ ಪತ್ರಿಕೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಗಸ್ಟ್ 15ರಂದು ಪ್ರಥಮ ಹಂತದಲ್ಲಿ ಬಿಬಿಎಂಪಿಯಲ್ಲಿ 198 ಕ್ಯಾಂಟೀನ್ ಆರಂಭವಾಗಲಿದೆ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ.
ರಾಜ್ಯದ ಉಳಿದ ಕಡೆಗಳಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈ ರೀತಿಯ ಕ್ಯಾಂಟೀನ್ ಆರಂಭಿಸಬೇಕು ಎನ್ನುವ ಜನರ ಬೇಡಿಕೆಯನ್ನು ಈಗಾಗಲೇ ಮುಖ್ಯ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಅವರು ನೀಡಿದ ಭರವಸೆಯ ಪ್ರಕಾರ ಎರಡನೆ ಹಂತದಲ್ಲಿ ಮಂಗಳೂರಿನಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.