500ರಷ್ಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ಅರ್ಹತೆ: ಶೇ.93.70 ಫಲಿತಾಂಶ

Update: 2017-07-03 17:16 GMT

ಮೂಡುಬಿದಿರೆ, ಜು. 3: ರಾಷ್ಟ್ರೀಯ ಮಟ್ಟದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ 3,241 ಮಂದಿ ಪರೀಕ್ಷೆ ಬರೆದಿದ್ದು, 3,037 ಮಂದಿ ತೇರ್ಗಡೆಯಾಗಿ ಶೇ.93.70 ಫಲಿತಾಂಶ ಲಭಿಸಿದೆ. ರಾಜ್ಯಮಟ್ಟದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ  ಪ್ರವೇಶಾತಿ ಸೀಟು ಹಂಚಿಕೆಯಲ್ಲಿ ಸಾಮಾನ್ಯ ವರ್ಗ, ಎಸ್‍ಸಿ, ಎಸ್‍ಟಿ, ಒಬಿಸಿ, ಹೈದರಾಬಾದ್ ಕರ್ನಾಟಕ ಹಾಗೂ ಕನ್ನಡ ಮಾಧ್ಯಮ ಕೋಟಾದಡಿಯಲ್ಲಿ ಆಳ್ವಾಸ್‍ನ 500 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಖಚಿತವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿ ತಿಳಿಸಿದ್ದಾರೆ.  

ನೀಟ್ ರಾಜ್ಯ ರ್ಯಾಕಿಂಗ್ ಪಟ್ಟಿಯಲ್ಲಿ 100ರ ರ್ಯಾಂಕ್ ಒಳಗಡೆ ಆಳ್ವಾಸ್‍ನ 4 ಮಂದಿ ವಿದ್ಯಾರ್ಥಿಗಳು, 200 ರ್ಯಾಂಕ್ ಒಳಗಡೆ 12, 300 ರ್ಯಾಂಕ್ ಒಳಗಡೆ 24, 400 ಒಳಗಡೆ 31, 500 ಒಳಗಡೆ 36, 1000 ರ್ಯಾಂಕ್ ಒಳಗಡೆ 64 ಮಂದಿ, 2000 ರ್ಯಾಂಕ್ ಒಳಗಡೆ 157, 3000 ಒಳಗಡೆ 253, 4000 ರ್ಯಾಂಕ್ ಒಳಗಡೆ 345, 5000 ಒಳಗಡೆ 420, 10,000 ಒಳಗಡೆ 750 ಮಂದಿ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. 

ಅತ್ಯುತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು:

ಶ್ರೀನಾಥ್ ರಾವ್ (39ನೇ ರ್ಯಾಂಕ್),  ಭರತ್ ಕುಮಾರ್( 63), ನಕುಲ್ ಎನ್.ರಾವ್(80), ವಿಕಾಸ್ ಜಿ.ಎಸ್(90), ಸೌಮ್ಯ ಶಶಿಧರ್ ಕಟ್ಟಿಮನಿ (117), ನೇಸರಾ (161), ನಿತಿನ್ ಟಿ.ಕೆ(171), ನಿಹಕೌಸರ್ ಅಬ್ದುಲ್ ರಶೀದ್ (181), ಗೋಕುಲ್ ರೆಡ್ಡಿ (186), ಅನುಸೂಯ (192), ವೈಭವೆ ಎನ್ ಹೆಬ್ಬಾಳ್ (197), ಸಂದೀಪ್ ಪೂಜಾರ್ (207), ವಿನಯ್ ಜಿ.ಕೆ (208), ನವೀನ್ ಕುಮಾರ್ ಎಂ ಕಡಕೊಲ್ (221), ರೋಹಿತ್ ಸಿ.(228), ಹರ್ಷಾ ಟಿ.ಎಸ್ (232), ಅಭಿಷೇಕ್ ಈರಯ್ಯ (239), ಸಚಿನ್ ಬಾಳಿಕಾಯಿ (243), ಮದನ್ ಟಿ.ಎನ್ (278), ನಿಹಾರಿಕಾ ಎಚ್.ಆರ್ (282), ಉಮೇಶ್ ಎನ್.ಪಟ್ಟದ್ (285), ಸಂಕೇತ್ ಡಿ.ಎ (292), ದುೃವಿಕಾ ಎಂ.ಆರ್ (297), ಶ್ರವಣ್ ವೈ.ಆರ್ (302),  ಆಕಾಶ್ ಈಶ್ವರ್ ಮಟ್ಟಿ (315), ಪ್ರಜ್ವಲ್ ಗೌಡ ಎಚ್.ಎಸ್ (341), ಶ್ರೇಯಸ್ ಜೆ(351), ಶಶಾಂಕ್ ಯು(365), ದಿವ್ಯಾ ವಿ.(376), ರಘುವೀರ್ ನಾಯಕ್ (380), ಸಂಪದಾ ಕನಿ (398), ಸಂಜಯ್ ಬಿ.(404),  ಕಾರ್ತಿಕ್ ಸ್ವಾಮಿ ಬಿ.ಆರ್(411), ಶತಕ್ ಎಂ.ಪಿ(467), ಮೇಘನಾ ಆರ್.(480), ಶಿವ ಕುಮಾರ್ ವಿ.ಕೆ(495).
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪಿಆರ್‍ಒ ಡಾ.ಪದ್ಮನಾಭ ಶೆಣೈ, ನೀಟ್ ಸಂಯೋಜಕ ಕೇಶವಮೂರ್ತಿ ಎಸ್.ಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News