ಯಕ್ಷಗಾನ ಫೆಲೋಶಿಪ್‌ಗೆ ರಾಘವ ನಂಬಿಯಾರ್ ಆಯ್ಕೆ

Update: 2017-07-20 17:59 GMT

ಉಡುಪಿ, ಜು.20: ಖ್ಯಾತ ಯಕ್ಷಗಾನ ವಿದ್ವಾಂಸ, ಹಿರಿಯ ಪತ್ರಕರ್ತ ಡಾ.ಕೆ. ಎಂ.ರಾಘವ ನಂಬಿಯಾರ್ ಅವರು ಯಕ್ಷಗಾನ ಸಂಶೋಧನೆಗಾಗಿ ಕೇಂದ್ರ ಸರಕಾರದ ಹಿರಿಯರ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ.

ಯಕ್ಷಗಾನದ ಸರ್ವಾಂಗತಜ್ಞರಾದ ಡಾ.ನಂಬಿಯಾರ್ ದಶಕಗಳಿಂದ ಯಕ್ಷಗಾನ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿರಿತ್ರೆಗಳ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಯಕ್ಷಗಾನದ ಭಾಗವತಿಕೆ ಕುರಿತಂತೆ ಸಂಶೋಧನೆ ನಡೆಸಿರುವ ಇವರು ರಂಗ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

 ಯಕ್ಷಗಾನ ಹಿಮ್ಮೇಳದ ಮೇಲೆ ಇವರು ಸಂಶೋಧನೆ ನಡೆಸಿ ಮಂಡಿಸಿದ ವಿದ್ವತ್ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್‌ಡಿ ಪದವಿಯನ್ನೂ, ಅದರ ಪ್ರಕಟಿತ ‘ಯಕ್ಷಮಂಗಳ’ ಕೃತಿಗೆ ವಿವಿ ಪ್ರಶಸ್ತಿಯನ್ನೂ ಅವರು ಪಡೆದಿದ್ದಾರೆ. ದೀವಟಿಗೆ ಬಯಲಾಟದ ಪುನರುಜ್ಜೀವನಕ್ಕೆ ಕಾರಣಕರ್ತರಾದ ಡಾ.ನಂಬಿಯಾರ್, 2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News