ಆ.15ರಂದು ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ
ಉಡುಪಿ, ಆ.6: ಉಡುಪಿ ತುಳುಕೂಟದ ವತಿಯಿಂದ 23ನೆ ವರ್ಷದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಆ.15ರಂದು ಸಂಜೆ 5ಗಂಟೆಗೆ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್ಟಾಪ್ ಸಭಾ ಭವನದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಅದಾನಿ ಯುಪಿ ಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಉದ್ಯಮಿ ಪುರುಷೋತ್ತಮ ಶೆಟ್ಟಿ ಭಾಗವಹಿಸಲಿರುವರು. ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ 2016-17ನೆ ಸಾಲಿನ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ಪ್ರಶಸ್ತಿ ವಿಜೇತ 25ನೇ ತುಳು ಕಾದಂಬರಿ ‘ಬಾಲುಮಾಡೆತಿ’ ಕೃತಿಕಾರ ಎಚ್. ಸಚ್ಚಿದಾನಂದ ಹೆಗ್ಡೆ ಅವರಿಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಮಂಗಳೂರು ಸೈಂಟ್ ಅಲೋಷಿಯಸ್ ಕಾಲೇಜಿನ ಉಪ ನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಕೃತಿ ಪರಿಚಯ ಮಾಡಲಿದ್ದಾರೆ. ಇದಕ್ಕೂ ಮುನ್ನ 3:30ಕ್ಕೆ ರುಕ್ಮಿಣಿ ಹಂದೆ ಅವರ ಶಿಷ್ಯೆ ವಸುಪ್ರದ ಜಿ.ಭಟ್ ಅವರಿಂದ ಭಕ್ತ ಕನಕದಾಸೆ ಹರಿಕಥೆ ಕಾಲಕ್ಷೇಪ ನೆಯಲಿದೆ.