ಅನುದಾನ ರದ್ದು ಖಂಡಿಸಿ ವಿದ್ಯಾರ್ಥಿಗಳು, ಪೋಷಕರಿಂದ ಧರಣಿ

Update: 2017-08-11 15:11 GMT

ಬಂಟ್ವಾಳ, ಆ.11: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕೊಲ್ಲೂರು ಮುಕಾಂಬಿಕ ದೇವಾಲಯದಿಂದ ದತ್ತು ಯೋಜನೆಯಡಿ ನೀಡಲಾಗುತ್ತಿದ್ದ ಅನದಾನವನ್ನು ರದ್ದುಗೊಳಿಸಿರುವ ಸರಕಾರದ ನಿಲುವನ್ನು ಖಂಡಿಸಿ ವಿದ್ಯಾರ್ಥಿಗಳ ಮತ್ತು ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಮುಂಭಾಗ ಬಟ್ಟಲು ಹಿಡಿದು ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳಿಗೆ ಪೋಷಕರು, ವಿವಿಧ ಸಂಘಟನೆಗಳ ಮುಖಂಡರು ಸಾಥ್ ನೀಡಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಧೋರಣೆಯನ್ನು ಖಂಡಿಸಿದರು.

ಸಿಎಂ ತಮ್ಮ ಕಿಸೆಯ ಹಣದಿಂದ ಕೊಲ್ಲೂರು ದೇವಳ ಅನ್ನ ನೀಡುತ್ತಿಲ್ಲ, ಭಕ್ತರು ಹಾಕಿದ ಹಣದಿಂದ ಅನ್ನ ನೀಡುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಅನುದಾನವನ್ನು ರದ್ದುಗೊಳಿಸಿ ನಮ್ಮ ಒಂದು ಹೊತ್ತಿ ತತ್ತು ಅನ್ನಕ್ಕೆ ಮಣ್ಣ ಹಾಕಿದ ನಿಮಗೆ ನಮ್ಮ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನದಾನ ರದ್ದು ಆದೇಶವನ್ನು ಕೂಡಲೇ ವಾಪಾಸು ಪಡೆದು ಮುಕಾಂಬಿಕೆ ಅನ್ನ ಪ್ರಸಾದ ಮತ್ತೆ ಮುಂದುವರಿಯಬೇಕು ಇಲ್ಲದಿದ್ದಲ್ಲಿ ಮುಂದೆ ವಿದ್ಯಾರ್ಥಿ ಶಕ್ತಿ ಎನೆಂಬುದನ್ನು ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತೊರಿಸುತ್ತವೆ ಎಂದು ಎಚ್ಚರಿಸಿದರು.

ಶಾಲಾ ಅಧ್ಯಾಪಕ, ಅದ್ಯಾಪಿಕಿಯರು ಹಾಜರಿದ್ದರು. ಕೊನೆಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News