ಮಕ್ಕಳು ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಬೇಕು :ಪ್ರಸಾದ್ ರೈ ಕಳ್ಳಿಮಾರ್

Update: 2017-08-12 13:19 GMT

ಮಂಗಳೂರು ,ಆ.12: ಸ್ನೇಹ ಪಬ್ಲಿಕ್ ಶಾಲೆಯ ಪರಿಸರ ಸಂಘವು ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಲು ಮಕ್ಕಳನ್ನು ಕೃಷಿಯ ಕಡೆಗೆ ಪ್ರೇರೇಪಿಸುವ ಉದ್ದೇಶದಿಂದ ತೋಟ ಗದ್ದೆಗಳಿಗೆ ಭೇಟಿ ನೀಡಲಾಯಿತು.   ನಂತರ ಇಕೊ ಕ್ಲಬ್ ನ ಉದ್ಘಾಟನೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷಿಕ ಮತ್ತು ಸಮಾಜ ಸೇವಕರು ಆಗಿರುವ ಪ್ರಸಾದ್ ರೈ ಕಳ್ಳಿಮಾರ್ ರವರು ಇಕೊ ಕ್ಲಬ್ ನ ಉದ್ಘಾಟಿಸಿ ಮಾತನಾಡಿದ ಅವರು “ಕಾಂಕ್ರೀಟ್ ನಾಡಿನಲ್ಲಿ ಬೆಳೆಯುತ್ತಿರುವ ನಾವು ಪ್ರಕೃತಿಯೊಂದಿಗೆ ಹೇಗೆ ಒಡನಾಟ ಬೆಳೆಸಿಕೊಳ್ಳಬೇಕು. ಪ್ರಕೃತಿ ಇದ್ದರೆ ಮಾತ್ರ ನಾವು, ಪ್ರಕೃತಿಯನ್ನು ಹಾಳುಗೆಡವಿದರೆ ಮನುಕುಲಕ್ಕೆ ಅಪಾಯ. ನಾವು ನಮ್ಮ ಮನೆಯಲ್ಲಿ ಸಣ್ಣಮಟ್ಟಿನಲ್ಲಿ ಕೃಷಿ ಮಾಡಿ ನಮ್ಮ ಮನೆಗೆ ಸಾಕಾಗುವ ತರಕಾರಿಗಳನ್ನು ಬೆಳೆಯಬೇಕು, ಕೃಷಿಯನ್ನು ನಮ್ಮ ಜೀವನದ ಭಾಗವಾಗಿಸಬೇಕು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮಾಜಸೇವಕ ಮತ್ತು ಕೃಷಿಕರಾಗಿರುವ ಅಚ್ಯುತ ಗಟ್ಟಿ ಉಪಸ್ಥಿತರಿದ್ದರು. ಮಕ್ಕಳು ಅಚ್ಯುತ ಗಟ್ಟಿಯವರ ಕೃಷಿ ಭೂಮಿಗೆ ಭೇಟಿ ನೀಡಿದರು. ಅಚ್ಯುತ ಗಟ್ಟಿಯವರು ಭತ್ತದ ಕೃಷಿಯ ಬಗ್ಗೆ , ಹಣ್ಣಿನಗಿಡಗಳ ಬಗ್ಗೆ ಹಾಗೂ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ಅನೇಕ ಉಪಯುಕ್ತ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಈ ಸಂಧರ್ಭದಲ್ಲಿ ಶಾಲೆಯ ಶಿಕ್ಷಕ -ಶಿಕ್ಷಕಿಯರಾದ ಆಶಿರುದ್ದೀನ್ , ಪಾವನ ಯಂ. ವಿ ಮತ್ತು ಸಹನಾರವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News