ಯೆನೆಪೊಯ ಮೆಡಿಕಲ್ ಆಸ್ಪತ್ರೆಯಲ್ಲಿ 3 ಟೆಸ್ಲಾ ಎಂಆರ್‌ಐ-ಕ್ಯಾಥ್‌ಲ್ಯಾಬ್ ಉದ್ಘಾಟನೆ

Update: 2017-08-13 14:05 GMT

ಮಂಗಳೂರು.ಆ,13:ದೇಶದ ಎಲ್ಲಾ ಜನರಿಗೂ ಆರೋಗ್ಯ ಸುರಕ್ಷೆ ನೀಡುವುದು ರಾಷ್ಟ್ರೀಯ ಆರೋಗ್ಯ ನೀತಿಯ ಉದ್ದೇಶವಾಗಿದೆ ಈ ನಿಟ್ಟಿನಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯ ಸೇರಿದಂತೆ ದೇಶದ ವೈದ್ಯಕೀಯ ರಂಗದಲ್ಲಿ ಮಹತ್ವದ ಸೇ ವೆ ನೀಡುತ್ತಿರುವ ಖಾಸಗಿ ಸಂಸ್ಥೆಗಳು ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದು ಕೇಂದ್ರ ಸರಕಾರದ ಆಯುಷ್ ಖಾತೆಯ ರಾಜ್ಯ ಸಚಿವ (ಸ್ವತಂತ್ರ ಖಾತೆ)ಶ್ರೀಪಾದ್ ಯೆಸ್ಸೋ ನಾಯಕ್ ತಿಳಿಸಿದ್ದಾರೆ.

ಕರಾವಳಿ,ಮಲೆನಾಡಿನ ಜಿಲ್ಲೆಗಳ ಪೈಕಿ ಪ್ರಥಮ ಬಾರಿಗೆ ಅತ್ಯಾಧುನಿಕ ತಾಂತ್ರಿಕತೆಯನ್ನು ಒಳಗೊಂಡ 3ಟೆಸ್ಲಾ ಎಂಆರ್‌ಐ ಸ್ಕಾನಿಂಗ್ ಯಂತ್ರಹಾಗೂ ಕ್ಯಾಥ್‌ಲ್ಯಾಬ್‌ನ್ನು ರವಿವಾರ ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾನಿಲಯದ ಆಸ್ಪತ್ರೆಯಲ್ಲಿ ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಷ್ಟ್ರೀಯ ಆರೋಗ್ಯ ನೀತಿಯ ಪ್ರಕಾರ ಸರಾಸರಿ ಜನರ ಜೀವಿತಾವಧಿಯನ್ನು ಹೆಚ್ಚಿಸುವುದು.ಶಿಶು ಮರಣವನ್ನು ತಡೆಗಟ್ಟುವುದು.ದೇಶದ ಜನರಿಗೆ ಆರೋಗ್ಯ ಸುರಕ್ಷೆಯನ್ನು ನೀಡಲು ಮತ್ತು ಸಮಾಜದ ದುರ್ಬಲವರ್ಗದವರಿ ಆರೋಗ್ಯರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ದೇಶದಲ್ಲಿ ವೈದ್ಯಕೀಯ ಸೇವೆ ನೀಡಲು ವೈದ್ಯರ ಕೊರತೆ ಇದೆ. ಈ ಸನ್ನಿವೇಶದಲ್ಲಿ ಸರಕಾರದ ಜೊತೆ ಜೊತೆಗೆ ಜನರಿಗೆ ಸೇವೆ ನೀಡಲು ಖಾಸಗಿ ಂಸ್ಥೆಗಳ ಸಹಕಾರ ಅಗತ್ಯ.ಪ್ರಸಕ್ತ ದೇಶದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು,ಸಾಮೂಹಿಕ ಲಸಿಕೆ ನೀಡಲು ಸರಕಾರದೊಂದಿಗೆ ಖಾಸಗಿ ಸಂಘ ಸಂಸ್ತೆಗಳು ಸಹಕಾರ ನೀಡುತ್ತಿವೆ.ಪ್ರಾಚೀನ ವೈದ್ಯಪದ್ಧತಿಯನ್ನು ಆಯುಷ್ ಆರೋಗ್ಯ ವ್ಯವಸ್ಥೆಯ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ತಿಳಿಸಿದ್ದಾರೆ.

 ಸುಸಜ್ಜಿತವಾದ ,ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳನ್ನು ಹೊಂದಿರುವ ಯೆನೆಪೋಯ ವಿಶ್ವ ವಿದ್ಯಾನಿಲಯದಂತಹ ಸಂಸ್ಥೆಗಳು ನೀಡುತ್ತಿರುವ ವೈದ್ಯಕೀಯ ಸೇವೆ ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದರು.

  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಮಾತನಾಡುತ್ತಾ,ಸಂಸ್ಥೆಯ ಸ್ಥಾಪಕ ಯೆನೆಪೋಯ ಮೊಹಿಯುದ್ಧೀನ್ ಕುಂಞ ಅವರ ಕನಸಿನಂತೆ ಸಂಸ್ಥೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ವೈದ್ಯಕೀಯ ಕಾಲೇಜು,ಆಸ್ಪತ್ರೆಯಾಗಿ ಬೆಳೆಯುತ್ತಿದೆ.ಇತ್ತಿಚಗೆ ಅಳವಡಿಸಲಾದ ರೊಬೋಟೆಕ್ ತಂತ್ರಜ್ಞಾನದ ಮೂಲಕ 125ಅಧಿಕ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಪ್ರಥಮ ಬಾರಿಗೆ ಕರಾವಳಿ ಕರ್ನಾಟಕದಲ್ಲಿ 3ಟೆಸ್ಲಾ ಎಂಆರ್‌ಐ ಸ್ಕಾನಿಂಗ್ ಯಂತ್ರಹಾಗೂ ಕ್ಯಾಥ್ ಲ್ಯಾಬ್‌ನ್ನು ಸ್ಥಾಪಿಸಿರುವುದು ಸಂಸ್ಥೆಯ ಸಾಧನೆಯ ಮೈಲು ಗಲ್ಲಾಗಿದೆ. ವೈದ್ಯಕೀಯ ರಂಗದಲ್ಲಿ ಹೊಸ ತಂತ್ರಜ್ಞಾನದ ಬಳಕೆ ಹೆಚ್ಚು ತ್ವರಿತಗತಿಯಲ್ಲಿ,ಗುಣಮಟ್ಟದ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲು ಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿ ಯೆನೆಪೋಯ ಸಂಸ್ಥೆ ಸಮಾಜದ ಕಟ್ಟಕಡೆಯ ಜನಸಾಮಾನ್ಯರಿಗೂ ದೊರೆಯುವ ರೀತಿಯ ವೈದ್ಯಕೀಯ ಸೌಲಭ್ಯವನ್ನು ನೀಡುತ್ತಾ ಬಂದಿದೆ.ಸರಕಾರದ ಯೋಜನೆಗೆ ಕೈ ಜೊಡಿಸುತ್ತಾ ಬಂದಿದೆ.ಉತ್ತಮ ವೈದ್ಯಕೀಯ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿ ಮನ್ನಣೆಯನ್ನು ಪಡೆದಿದೆ ಎಂದು ಅಬ್ದುಲ್ಲಾ ಕುಂಞ ತಿಳಿಸಿದರು.

ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಸಮಾರಂಭದಲ್ಲಿ ಭಾಗವಹಿಸಿ ಶುಭಹಾರೈಸಿದರು.ನವೆಂಬರ್ 9-11ರವರೆಗೆ ದುಬಾಯಲ್ಲಿ ನಡೆಯಲಿರುವ ಜಾಗತಿಕ ವೈದ್ಯಕೀಯ ಸಮಾವೇಶಕ್ಕೆ ಭಾರತೀಯರನ್ನು ಆಹ್ವಾನಿಸುವುದಾಗಿ ತಿಳಿಸಿದರು. ಉಡುಪಿಯಲ್ಲಿ ಹಾಜಿ ಅಬ್ದುಲ್ಲಾ ನೆನಪಿನಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನಿಡುವ ಆಸ್ಪತ್ರೆಯನ್ನು ಆರಂಭಿಸುವುದಾಗಿ ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಅರಣ್ಯ,ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ,ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ,ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಹಾಗೂ ವೈಎಂಕೆ ಪೌಂಡೇಶನ್ನಿನ ಅಧ್ಯಕ್ಷ ವೈ.ಮುಹಮ್ಮದ್ ಕುಂಞ,ಯೆನೆಪೋಯ ಮೆಡಿಕಲ್ ಕಾಲೇಜ್,ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮುಹಮ್ಮದ್ ಅಮೀನ್ ವಾನಿ, ಯೆನೆಪೋಯ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್,ಕುಲಸಚಿವ ಡಾ.ಜಿ.ಶ್ರೀ ಕುಮಾರ್ ಮೆನನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News