ದೇಶದ ಐಕ್ಯತೆ-ಪ್ರಗತಿಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸಲು ದೃಢ ಸಂಕಲ್ಪ ಮಾಡೋಣ: ಸಚಿವ ರೈ

Update: 2017-08-15 04:57 GMT

ಮಂಗಳೂರು, ಆ.15: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 71ನೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಗರದ ನೆಹರು ಮೈದಾನದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಧ್ವಜಾರೋಹಣಗೈದು, ಸ್ವಾತಂತ್ರ್ಯ ಸಂದೇಶ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನು ಅತ್ಯಂತ ಗೌರವದೊಂದಿಗೆ ಸ್ಮರಿಸುವುದರ ಜೊತೆಗ ಅವರ ಜೀವನ ಆದರ್ಶ ಮತ್ತು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರಮದಲ್ಲಿ ದೇಶದ ಐಕ್ಯತೆ ಮತ್ತು ಪ್ರಗತಿಗೆ ಮಾರಕವಾದ ದುಷ್ಟ ಶಕ್ತಿಗಳನ್ನು ಎದುರಿಸಲು ದೃಢ ಸಂಕಲ್ಪಮಾಡಬೇಕು. ದೇಶದ ಗಡಿ ಕಾಯವ ವೀರ ಸೇನಾನಿಗಳನ್ನು ನೆನಪಿಸುವುದರೊಂದಿಗೆ ಜಾತಿ, ಮತ ಬೇಧಗಳನ್ನು ಮರೆತು ಸರ್ವರನ್ನು ಪ್ರೀತಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್. ಲೋಬೊ. ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಜಿಲ್ಲಾ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ಉಪಸ್ಥಿತರಿದ್ದರು.

ವಿಶೇಷ ಪೊಲೀಸ್ ಗಾಯನ ಹಾಗೂ ವಾದ್ಯ ವೃಂದದೊಂದಿಗೆ 21 ತುಕಡಿಗಳ ಪಥಸಂಚಲ ನಡೆಯಿತು. ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News