ಗಮನ ಸೆಳೆದ ಹಳೆ ಕಾರು, ಬೈಕ್‌ಗಳ ಜಾಥಾ ‘ಕ್ಲಾಸಿಕ್ ಪೆರೆಡ್’

Update: 2017-08-15 08:54 GMT

ಉಡುಪಿ, ಆ.15: ಮಣಿಪಾಲ ಅಟೋ ಕ್ಲಬ್‌ನ ಆಶ್ರಯದಲ್ಲಿ 70ನೆ ಸ್ವಾತಂತ್ರೋತ್ಸವದ ಅಂಗವಾಗಿ ‘ಕ್ಲಾಸಿಕ್ ಪೆರೆಡ್’ ಹಳೆ ಕಾರು, ಬೈಕುಗಳ ಜಾಥವು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಿಂದ ಕರಾವಳಿ ಬೈಪಾಸ್‌ವರೆಗೆ ಜರಗಿತು.

ಜಾಥಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಕ್ಲಬ್‌ನ ಅಧ್ಯಕ್ಷ ನಿಶಾಂತ್ ಭಟ್ ಚಾಲನೆ ನೀಡಿದರು. ಬಳಿಕ ವಾಹನ ಜಾಥವು ಸಿಂಡಿಕೇಟ್ ಸರ್ಕಲ್, ಇಂದ್ರಾಳಿ, ಕಡಿಯಾಳಿ, ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಕರಾವಳಿ ಬೈಪಾಸ್‌ಗೆ ಆಗಮಿಸಿ, ಬಳಿಕ ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.

ಜಾಥದಲ್ಲಿ 1929ರ ಪ್ಲೈವೌತ್, 1934ರ ಮೋರಿಸ್ ಟೆನ್ ಪೋರ್, 1936ರ ಫೋರ್ಡ್, 1948ರ ಮೋರಿಸ್ ಮೈನರ್, 1948ರ ಬಗ್ ಪಿಯೆಟ್, 1951ರ ಮೋರಿಸ್, 1956ರ ಪಿಯೆಟ್ 1100, ಲ್ಯಾಂಡ್‌ಮಾಸ್ಟರ್, ಪಿಯೆಟ್, ಕ್ಲಾಸಿಕ್ ಕಾರುಗಳು, ವಿಂಟೇಜ್ ಬೈಕುಗಳು, ಕ್ಲಾಸಿಕ್ ಬೈಕುಗಳು ಆಕರ್ಷಿತವಾಗಿದ್ದವು.

ಈ ಸಂದರ್ಭದಲ್ಲಿ ಹಳೆ ಕಾರುಗಳ ಸಂಗ್ರಹಕರಾದ ಪ್ರಕಾಶ್ ಶೆಟ್ಟಿ, ಅರುಣ್ ಶಿರಾಲಿ, ಗಣೇಶ್ ಉದ್ಯಾವರ ಮತ್ತು ಹಳೆ ಕಾರುಗಳನ್ನು ದುರಸ್ತಿ ಮಾಡುವ ವಸಂತ್ ಮತ್ತು ಬೈಕ್ ದುರಸ್ತಿ ಮಾಡುವ ರಶೀದ್ ಅವರನ್ನು ಸನ್ಮಾನಿಸ ಲಾಯಿತು.

ಕ್ಲಬ್‌ನ ಉಪಾಧ್ಯಕ್ಷ ಡಾ. ಅಫ್ಝಲ್ ಪಿ.ಎಂ., ಕಾರ್ಯದರ್ಶಿ ಡಾ.ರಾಜೇಶ್ ನಾಯಕ್, ಡಾ.ದಿನೇಶ್ ನಾಯಕ್, ಜೆರಿ ಜೊಸೆಫ್ ಮೊದಲಾದವರು ಉಪಸ್ಥಿತರಿದ್ದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News