ಅಮೆಮಾರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2017-08-15 10:24 GMT

ಫರಂಗಿಪೇಟೆ, ಆ. 15: ಬದ್ರಿಯಾ ಮಸೀದಿ ಹಾಗೂ ಬದ್ರಿಯಾ ಮದರಸ ಮತ್ತು ಎಸ್ಕೆಎಸ್ಎಸ್ಎಫ್ ಅಮೆಮಾರ್ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಲಾಯಿತು.

ಧ್ವಜರೋಹಣವನ್ನು ಮಸೀದಿಯ ಅಧ್ಯಕ್ಷ ಹಾಜಿ ಉಮರಬ್ಬಅವರು ನೆರವೇರಿಸಿದರು. ಮಸೀದಿಯ ಖತೀಬ್ ಅಬೂಸ್ವಾಲಿಹ್ ಪೈಝಿ ಅಕ್ಕರಂಗಡಿ ಸ್ವಾತಂತ್ರ್ಯ ಸಂದೇಶ ಭಾಷಣಗೈದರು.
ಭಾರತ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಅಹೋರಾತ್ರಿ ದುಡಿದರು. ಧರ್ಮ ಭೇದವಿಲ್ಲದೆ ಸಮರಗೈದು ನಮಗೆ ಅವರು ಕೊಟ್ಟ ಸ್ವಾತಂತ್ರ್ಯವನ್ನು ನಾವು ಪರಸ್ಪರ ಸೌಹಾರ್ದತೆಯ ಮೂಲಕ ಉಳಿಸಿಕೊಳ್ಳಬೇಕು. ಭಾರತದಲ್ಲಿ ಸಂವಿಧಾನ ಬದ್ದವಾಗಿ ಎಲ್ಲರೂ ಜೀವಿಸಬೇಕು. ನಮ್ಮ ರಾಷ್ಟ್ರದ್ವಜದ ಸಂದೇಶವೂ ಅದಾಗಿದೆ ಎಂದರು.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮದರಸ ಮತ್ತು   ದರ್ಸ್ ವಿದ್ಶಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಮದರಸ ವಿದ್ಶಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಶಕ್ಷ ಎಫ್.ಎ.ಅಬ್ದುಲ್ ಖಾದರ್, ಮಸೀದಿಯ ಕಾರ್ಯದರ್ಶಿ ಅಬೂಸ್ವಾಲಿಹ್ ಮುಸ್ಲೀಯಾರ್, ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಹಮೀದ್, ಸುಲೈಮಾನ್, ಹಾರಿಸ್, ರಝಾಕ್ ಮದರಸ ಮುಅಲ್ಲಿಂರಾದ ಇಮ್ರಾನ್ ದಾರಿಮಿ,  ಇಸ್ಮಾಯಿಲ್ ಯಮಾನಿ, ಆದಂ ಮದನಿ, ಅಬೂಬಕರ್ ಮದನಿ,  ತಸ್ರೀಫ್ ಅಝ್ಝರಿ, ಮತ್ತು ಎಸ್ಕೆ.ಎಸ್.ಎಸ್.ಎಫ್ ಅಮೆಮಾರ್ ಶಾಖೆಯ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದರು. ಸದರ್ ಮುಅಲ್ಲಿಂ ಮುಹಿಯ್ಶದ್ದೀನ್ ಅಲ್ ಹಸನಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News