ಮಚ್ಚಂಪಾಡಿ : ಹಿಮಾಯತುಲ್ ಇಸ್ಲಾಂ ಮದ್ರಸಾದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ

Update: 2017-08-15 10:48 GMT

ಮಂಜೇಶ್ವರ,ಆ.15 : ಮಚ್ಚಂಪಾಡಿ ಜುಮಾ ಮಸೀದಿ ಸಮಿತಿ ಹಾಗೂ  ಹಿಮಾಯತುಲ್ ಇಸ್ಲಾಂ ಮದ್ರಸಾ ಇದರ ನೇತೃತ್ವದಲ್ಲಿ 71 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮದ್ರಸಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಚ್ಚಂಪಾಡಿ ಜುಮಾ ಮಸೀದಿ ಅಧ್ಯಕ್ಷ ಪಿ.ಎಚ್ಚ್ ಹುಸೈನಾರ್ ಹಾಜಿ ದ್ವಜಾರೋಹಣಗೈದರು. ಈ ಸಂದರ್ಭ ಪಿ.ಎಚ್ಚ್ ಅಬ್ದುಲ್ ಹಮೀದ್ , ಪಂಚಾಯತ್ ಸದಸ್ಯ ಫೈಝಲ್ ಸದರ್ ಮುಅಲ್ಲಿಂ ಶಬೀರ್ ಬಾಖವಿ, ರಫೀಕ್ ಸಅದಿ , ಜಮಾಅತ್ ಕಾರ್ಯದರ್ಶಿ ಅಬ್ಬಾಸ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಮದ್ರಸಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹಾಡು, ಹಾಗೂ ಭಾಷಣ ನಡೆಯಿತು. ಮತ್ತು ವಿದ್ಯಾರ್ಥಿಗಳಿಗೆ ಕ್ವಿಝ್ ಸ್ಪರ್ಧೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News