ಶಾಂತಿಗೆ ಭಗ್ನ ತರುವ ಶಕ್ತಿಗಳ ವಿರುದ್ಧ ಜಾಗ್ರತರಾಗಿ: ಟಿ.ಜಿ.ಗುರುಪ್ರಸಾದ್

Update: 2017-08-15 16:49 GMT

ಕಾರ್ಕಳ, ಆ. 15: ದೇಶದ ಒಳಗೆ ಮತ್ತು ಹೊರಗೆ ಶಾಂತಿಗೆ ಭಗ್ನ ತರುವ ಶಕ್ತಿಗಳ ವಿರುದ್ಧ ಜಾಗೃತರಾಗಬೇಕು. ಪ್ರಸ್ತುತ ಅತ್ಯಂತ ಸೂಕ್ಷ್ಮ ಸನ್ನಿವೇಶದಲ್ಲಿ ಈ ದೇಶದ ಏಕತೆ ಮತ್ತು ಅಖಂಡತೆಯನ್ನು ಅನುಷ್ಟಾನಗೊಳಿಸಬಹುದಾದ ಪರಿಸ್ಥಿತಿಯಿದೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದು ಎನ್ನುವ ಭಾವನೆಯಿಂದ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಕ್ಷೇತ್ರ ತಹಸೀಲ್ದಾರ್ ಟಿ.ಜಿ.ಗುರುಪ್ರಸಾದ್ ಹೇಳಿದ್ದಾರೆ.

ಅವರು ಕಾರ್ಕಳ ಗಾಂ ಮೈದಾನದಲ್ಲಿ ಮಂಗಳವಾರ ನಡೆದ 71ನೇ ಸ್ವಾಂತಂತ್ರೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿ. ಸ್ವಾತಂತ್ರ್ಯ ದಿನಾಚರಣೆ ಆಚರಣೆಯಾಗದೆ ನಮ್ಮ ಬದ್ಧತೆ, ಸಹಭಾಗಿತ್ವ ದೃಡಪಡಿಸಬೇಕಾಗಿದೆ. ಕಾರ್ಕಳ ತಾಲೂಕಿನಲ್ಲಿ ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗುವ ಮೂಲಕ ಸರಕಾರದ ಸವಲತ್ತುಗಳನ್ನು ಪ್ರಮಾಣಿಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ ಎಂದರು.

ಸ್ವಚ್ಛ ಭಾರತ ಕಾರ್ಯಕ್ರಮ ಅನುಷ್ಟಾನದಲ್ಲಿ ಕಾರ್ಕಳ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಾರ್ಕಳ ತಾಲೂಕಿನ 21 ಗ್ರಾ.ಪಂ ಈಗಾಗಲೇ ನಗದು ರಹಿತ ವ್ಯವಹಾರಕ್ಕೆ ಚಾಲನೆಯನ್ನು ನೀಡಲಾಗಿದೆ. 4 ಗ್ರಾಪಂ ಮುಂಚೂಣಿಯಲ್ಲಿದೆ. ಇದೇ ವಿಚಾರಕ್ಕೆ ಅದ್ಯಯನ ನಡೆಸಲು ರಾಜಸ್ತಾನದ ನಿವೃತ್ತ ಮುಖ್ಯಕಾರ್ಯದರ್ಶಿ ಕರ್ನಾಟಕವನ್ನು ಆಯ್ಕೆ ಮಾಡಿದ್ದು ಅದರಲ್ಲಿ ನಮ್ಮ ತಾಲೂಕಿನ ವರಂಗ ಗ್ರಾಪಂ ಬೇಟಿ ನೀಡಲಿದ್ದಾರೆ. ಇದು ನಮ್ಮ ಅದೃಷ್ಟ ಆಗಿದೆ.

21 ಗ್ರಾ.ಪಂ ಮತ್ತು ಪುರಸಭೆಗೆ ತ್ಯಾಜ ವಿಲೇವಾರಿ ಘಟಕಕ್ಕೆ ಜಾಗವನ್ನು ಈಗಾಗಲೇ ಗುರುತಿಸಿದ್ದು ಅವುಗಳ ಪೈಕಿ 8 ಗ್ರಾ.ಪಂ.ಗಳು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಕುಡಿಯುವ ನೀರಿನ 112 ಕೋಟಿ ರೂ. ಅನುದಾನ ರಾಜ್ಯ ಸರಕಾರ ಮಂಜೂರುಗೊಳಿಸಿದ್ದು, ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. 32 ಇಲಾಖೆಗಳ ಅಭಿವೃದ್ದಿ ಕ್ರಿಯಾಯೋಜನೆ ಶಾಸಕರ ನೇತೃತ್ವದಲ್ಲಿ ಅನುಮೊದನೆಗೊಂಡಿದ್ದು, ಶೇ.48ರಷ್ಟು ಸಾಧನೆ ನಡೆದಿದೆ ಸಾರ್ವಜನಿಕರ ಸಹಬಾಗಿತ್ವದಿಂದ ಕಾರ್ಕಳದಲ್ಲಿನ ಕೆಲವು ಅಬಿವೃದ್ದಿ ಕಾಮಗಾರಿಗಳು ನಡೆದಿದ್ದು ಹೀಗೆ ಮುಂದಿನ ದಿನಗಳಲ್ಲಿ ಸಹಕಾರ ನೀಡಿ ಅಬಿವೃದ್ದಿಯತ್ತ ಸಾರ್ವಜನಿಕರು ಕೈಜೋಡಿಸುವಂತೆ ಹೇಳಿದರು.

ವಿಧಾನ ಸಭೆ ಪ್ರತಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್, ತಾ.ಪಂ.ಅಧ್ಯಕ್ಷೆ ಮಾಲಿನಿ ಶೆಟ್ಟಿ, ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಜಿ.ಪಂ.ಸದಸ್ಯರಾದ ದಿವ್ಯಾಶ್ರೀ ಅಮೀನ್, ಜ್ಯೋತಿ, ರೇಶ್ಮ ಶೆಟ್ಟಿ, ಉದಯ ಎಸ್.ಕೋಟ್ಯಾನ್, ಪುರಸಭೆ ಸದಸ್ಯರುಗಳು, ತಾ.ಪಂ.ಸದಸ್ಯರುಗಳು ಮತ್ತಿತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಲಾ-ಕಾಲೇಜುಗಳಿಂದ ವಿದ್ಯಾರ್ಥಿಗಳಿಂದ ಅನಂತಶಯನದಿಂದ ಗಾಂ ಮೈದಾನದವರೆಗೆ ಆಕರ್ಷಕ ಪಥ ಸಂಚಲನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News