ಉಳ್ಳಾಲದಾದ್ಯಂತ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವ

Update: 2017-08-16 17:43 GMT

ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಕ್ಯಾಂಪಸ್
ನಿಟ್ಟೆ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಪಾನೀರ್ ಕ್ಯಾಂಪಸ್‌ನಲ್ಲಿರುವ ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಫಾರ್ಮಾಕ್ಯುಟಿಕಲ್ ಸಯನ್ಸಸ್ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಕ್ಯಾಂಪಸ್‌ನಲ್ಲಿ ನಡೆದ  ಸ್ವಾತಂತ್ರ್ಯೋತ್ಸವದ ಧ್ವಜರೋಹಣ ಬೆಂಗಳೂರು ಅಲಾಯನ್ಸ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಕೆ.ರವೀಂದ್ರ ನೆರವೇರಿಸಿದರು.

2022ರ ವೇಳೆ ಹೊಸ ಭಾರತ ಕಟ್ಟುವ ನಿಟ್ಟಿನಲ್ಲಿ ಸ್ವಚ್ಛ, ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮು ವೈಶಮ್ಯ ರಹಿತ ಸಮಾಜ ನಿರ್ಮಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸರ್ವರ ಪ್ರಯತ್ನ ಅಗತ್ಯ ಎಂದರು.
ಡಾ.ಸಿ.ಎಸ್.ಶಾಸ್ತ್ರಿ ಸ್ವಾಗತಿಸಿದರು. ಡಾ.ಆರ್.ನಾರಾಯಣ ಚಾರ್ಯುಲು ವಂದಿಸಿದರು.

ಉಳ್ಳಾಲ ನಗರಸಭೆ
ಉಳ್ಳಾಲ ನಗರಸಭೆ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ದಿನದ ಧ್ವಜರೋಹಣ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ನೆರವೇರಿಸಿದರು.

ನಗರಸಭಾ ಸದಸ್ಯರಾದ ಮೊಹಮ್ಮದ್ ಮುಕ್ಕಚ್ಚೇರಿ, ಗಿರಿಜಾಬಾಯಿ, ಫಾರೂಕ್ ಉಳ್ಳಾಲ್, ದಿನೇಶ್ ರೈ, ಇಸ್ಮಾಯಿಲ್ ಹಾಗೂ ಸುಂದರ ಉಳಿಯ ಮಾತನಾಡಿದರು. ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು. ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್‌ರವರು ವಂದಿಸಿದರು.

ಕೊಣಾಜೆ ಗ್ರಾ.ಪಂ.

ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸ್ವಾತಂತ್ರ್ಯ ದಿನದ ಧ್ವಜರೋಹಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ ನೆರವೇರಿಸಿದರು.

ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಮಾಜಿ ಗ್ರಾ.ಪಂ ಸದಸ್ಯರು, ಪಂಚಾಯಿತಿ ಕಾರ್ಯದರ್ಶಿ, ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನವಭಾರತ ನಿರ್ಮಾಣ, ಸ್ವಚ್ಛತಾ ಸಂಕಲ್ಪ ಕೈಗೊಳ್ಳಲಾಯಿತು.


ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ

ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನದ ಧ್ವಜರೋಹಣ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಜತೆ ಕಾರ್ಯದರ್ಶಿ ಎ.ಕೆ.ಮೊಹಿಯುದ್ದೀನ್ ನೆರವೇರಿಸಿದರು.

ರಾಣಿ ಅಬ್ಬಕ್ಕ ದೇವಿ ಹುಟ್ಟಿರುವ ನಾಡಿನಲ್ಲಿ ಹುಟ್ಟಿರುವುದು ನಮಗೆಲ್ಲರಿಗೂ ಹೆಮ್ಮೆ. ಯಾಕೆಂದರೆ ಅವರು ಸ್ವಾತಂತ್ರ್ಯದ ಮೌಲ್ಯಗಳಿಗಾಗಿ ಕೊನೆಯುಸಿರಿರುವಗೂ ಹೋರಾಡಿ ಸ್ವಾಭಿಮಾನದ ಪ್ರತಿ ಮೂರ್ತಿಯಾಗಿದ್ದವರು ಮತ್ತು ದೇಶದ ಐತಿಹಾಸಿಕ ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ ಪೂರ್ಣ ಅಧ್ಯಾಯವನ್ನು ದಾಖಾಲಿಸಿದ್ದಾರೆ. ಅವರೊಂದಿಗೆ ಸ್ವತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹಾತ್ಮರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿರುವ ಸ್ವಚ್ಚತಾ ಸಪ್ತಾಹ ಪ್ರಯುಕ್ತ ಪ್ರತಿಜ್ಞೆ ಭೋದಿಸಲಾಯಿತು. ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಬಾವ ಇಸ್ಮಾಯಿಲ್, ಕೇಂದ್ರ ಜುಮಾ ಮಸೀದಿಯ ಸದಸ್ಯ ಹಮೀದ್, ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ಹನೀಫ್, ಯು.ಕೆ ಹಸೈನಾರ್ ಕೋಟೆಪುರ, ಮೊಹಮ್ಮದ್ ನೌಷಾದ್ ಕೋಟೆಪುರ, ಇಸ್ಮಾಯಿಲ್ ಶಫೀಕ್ ಕೋಟೆಪುರ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಡಿ ವಂದಿಸಿದರು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

ಜಾರದಗುಡ್ಡ ಸರ್ಕಾರಿ ಶಾಲೆ

ಬೋಳಿಯಾರ್ ಗ್ರಾಮದ ಜಾರಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ಥಳೀಯ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀರ್ ಧ್ವಜರೋಹಣಗೈದರು.

ಗ್ರಾಮ ಪಂ. ಸದಸ್ಯೆ ವಿದ್ಯಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ರಿಯಾರ್, ಸ್ಥಳೀಯರಾದ ಕಮಲಾ ಕೆ.ಬಿ, ಇಂತಿಯಾರ್, ಹಸೈನಾರ್, ಸುಲೈಮಾನ್, ಕೆ.ಕೆ.ಮುನವ್ವರ್, ಜಯ, ರಫೀಕ್ ಎಂ, ಅಹ್ಮದ್ ಬಾವ, ಮುಖ್ಯ ಶಿಕ್ಷಕಿ ಗುಲಾಬಿ, ಗಾಯತ್ರಿ, ಕಿರಣ,, ಮನು ಕುಮಾರ್, ಜಾಸ್ಮಿನ್ ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ರಹ್ಮಾನ ಸ್ವಾಗತಿಸಿದರು.

ಇರಾ ಗ್ರಾಮ ಪಂ.
ಇರಾ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸ್ವಾತಂತ್ರ್ಯ ದಿನದ ಧ್ವಜರೋಹಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ನೆರವೇರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಗಣ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾ.ಪಂ. ಅಭಿವೃದ್ಧಿ ಆಧಿಕಾರಿ ನಳಿನಿ ಎ.ಕೆ, ಸಿಬ್ಬಂದಿ, ಅಧ್ಯಾಪಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯ ಗೋಪಾಲ ಅಶ್ವತ್ತಡಿ ಸ್ವಾಗತಿಸಿದರು. ಸಿಬ್ಬಂದಿ ಗುಲಾಬಿ ವಂದಿಸಿದರು.

ದೇರಳಟ್ಟೆ: ಕಣಚೂರು ಶಿಕ್ಷಣ ಸಂಸ್ಥೆ
ದೇರಳಕಟ್ಟೆ ಕಣಚೂರು ವಿದ್ಯಾಸಂಸ್ಥೆಲ್ಲಿ ಸಂಸ್ಥೆಯ ಅಧ್ಯಕ್ಷ ಯು.ಕೆ.ಮೋನು ಧ್ವಜರೋಹಣಗೈದರು. ಕಣಚೂರು ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲೆ ಡಾ.ಶೀಶಾ ಖಂಡಿಗೆ, ಆಡಳಿತಾಧಿಕಾರಿ ಡಾ.ರೋಹನ್ ಮೊನಿಸ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಟಿ.ಇಕ್ಬಾಲ್ ಅಹಮದ್, ಹೇಮಲತಾ, ಆನಂದಿ ಕೆ., ಲಿನೆಟ್ ಡಿ’ಸೋಜ ಮೊದಲಾದವರು ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲೆ ವಿನಿಟ ಗಾಮ ರೋಸ್ ಮಥಾಯಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಕೀನಾ ಖಾನಮ್ ಸ್ವಾತಂತ್ಸ್ಯ ದಿನದ ಮಹತ್ವ ವಿವರಿಸಿದರು. ವಿದ್ಯಾರ್ಥಿ ನಾಯಕ ಸನಿನ್ ವಂದಿಸಿದರು. ವಿದ್ಯಾರ್ಥಿನಿ ಅನೀಷಾ ಕಾರ್ಯಕ್ರಮ ನಿರೂಪಿಸಿದರು.


ಬಿಜೆಪಿ ಮಂಗಳೂರು ಕ್ಷೇತ್ರ
ಮಂಗಳೂರು ಕ್ಷೇತ್ರ ಬಿಜೆಪಿ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜರೋಹಣ ಹಿರಿಯ ಮುಖಂಡ ತೀಸಾರಾಮ ಬಂಗೇರ ನೆರವೇರಿಸಿದರು. ಕ್ಷೇತ್ರಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಅಲ್ಪಸಂಖ್ಯಾತ ಮೋಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಡಾ.ಕೆ.ಎ.ಮುನೀರ್ ಬಾವ, ಪ್ರಮುಖರಾದ ಮನೋಜ್ ಆಚಾರ್ಯ, ಮೋಹನ್‌ದಾಸ್ ಕಿನ್ಯ, ಸುಜಿತ್ ಮಾಡೂರು, ಅಸ್ಗರ್ ಮುಡಿಪು, ಅಶ್ರಫ್ ಹರೇಕಳ, ಸಚಿನ್ ಶೆಟ್ಟಿ, ನವೀನ್ ಶೆಟ್ಟಿ ಕೊಡಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ನರಿಂಗಾನ ಸರ್ಕಾರಿ ಶಾಲೆ
ನರಿಂಗಾನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಧ್ವಜರೋಹಣಗೈದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಆಳ್ವರಬೆಟ್ಟು, ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಫಯಾರ್, ಉದ್ಯಮಿ ಹನೀಫ್ ಚಂದಹಿತ್ಲು, ಡಿವೈಎಫ್‌ಐ ಮುಖಂಡ ಅಬ್ದುಲ್ ರಝಾಕ್, ಜಲೀಲ್ ಇನ್ನಿತರರು ಭಾಗವಹಿಸಿದ್ದರು.

ಪ್ರಭಾರ ಮುಖ್ಯ ಶಿಕ್ಷಕ ವಸಂತ ಕೋಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News