​ ಮಸೀದಿ-ದಫನ ಭೂಮಿಯಲ್ಲಿ ಗಿಡ ನೆಟ್ಟು ಬೆಳೆಸಲು ಸೂಚನೆ

Update: 2017-08-17 10:27 GMT

ಮಂಗಳೂರು, ಆ.17: ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ನಿರ್ದೇಶನದ ಮೇರೆಗೆ ಮಸೀದಿ ಹಾಗೂ ದಫನ ಭೂಮಿಗಳ ಸುತ್ತ ಗಿಡ/ಮರ ನೆಡುವ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ಮಸೀದಿಯ ಅಧ್ಯಕ್ಷರು/ಕಾರ್ಯದರ್ಶಿಗಳು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ವಲಯ ಸಂರಕ್ಷಣಾಧಿಕಾರಿಯನ್ನು ಸಂಪರ್ಕಿಸಿ ಗಿಡಗಳನ್ನು ಪಡಕೊಂಡು ಮಸೀದಿಯ/ದಫನ ಭೂಮಿಯಲ್ಲಿ ಗಿಡಗಳನ್ನು ನೆಟ್ಟು ವಕ್ಫ್ ಸೊತ್ತುಗಳ ಮುಂದೆ ನಾಮಫಲಕ ಅಳವಡಿಸಲು ಸೂಚಿಸಲಾಗಿದೆ.

ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಕಾರ್ಯಪ್ರವೃತ್ತರಾಗಿ ಈ ತಿಂಗಳಾಂತ್ಯದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾ ವಕ್ಫ್ ಕಚೇರಿಗೆ ಮಾಹಿತಿ ನೀಡಬೇಕು ಎಂದು ಎಂದು ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು (ಪಡೀಲ್ ನರ್ಸರಿ-ಮೊ.ಸಂ: 9448887973), ಬಂಟ್ವಾಳ (ಶಂಭೂರು ನರ್ಸರಿ-ಮೊ.ಸಂ: 9448134012), ಬೆಳ್ತಂಗಡಿ (ಮುಂಡಾಜೆ-ಕಾಪು ನರ್ಸರಿ-ಮೊ.ಸಂ: 94487 29 606), ಉಪ್ಪಿನಂಗಡಿ (ಉದನೆ ನರ್ಸರಿ-ಮೊ.ಸಂ: 9481375294), ಪುತ್ತೂರು (ಕನಕಮಜಲು ನರ್ಸರಿ- ಮೊ.ಸಂ: 9449068568), ಪಂಜ (ಯೇನೆಕಲ್ ನರ್ಸರಿ-ಮೊ.ಸಂ: 944821 66257), ಸುಬ್ರಹ್ಮಣ್ಯ (ಕಲ್ಲಾಜೆ ನರ್ಸರಿ-ಮೊ.ಸಂ: 9481390040), ಸುಳ್ಯ (ಮೇದಿನಡ್ಕ ನರ್ಸರಿ-ಮೊ.ಸಂ: 9620426901)ಇವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News