ಕಳವು ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

Update: 2017-08-17 13:02 GMT

ಪುತ್ತೂರು, ಆ. 17: ಪುತ್ತೂ ಗ್ರಾಮಾಂತರ, ನಗರ, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಮನೆ ಕಳವು, ಅಡಿಕೆ ಕಳವು ಹಾಗೂ ದನ ಕಳ್ಳತನ ನಡೆಸುತ್ತಿದ್ದ ಒಟ್ಟು ಆರು ಪ್ರಮುಖ ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬುಧವಾರ  ತಡ ರಾತ್ರಿ  ಗಸ್ತು ನಿರತರಾಗಿದ್ದ ಸಂಪ್ಯ ಗ್ರಾಮಾಂತರ ಪೊಲೀಸರು ಕಲ್ಲರ್ಪೆ ಬಳಿ ಅನುಮಾನಸ್ಪದ ರಿಕ್ಷಾವೊಂದರಲ್ಲಿ 6 ಮಂದಿ ಕುಳಿತಿದ್ದು ಕಳ್ಳತನ ನಡೆಸಲು ಹೊಂಚು ಹಾಕುತ್ತಿದ್ದ ವೇಳೆ ಪೊಲೀಸರು ಆರೋಪಿಗಳಾದ ಪುತ್ತೂರು ತಾರಿಗುಡ್ಡೆ ನಿವಾಸಿ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್, ಅನ್ವರ್ ಅಲಿ ತಾರಿಗುಡ್ಡೆ, ಪುತ್ತೂರು ನಗರ ನಿವಾಸಿ ಮುಹಮ್ಮದ್ ಸಾದಿಕ್, ತೌಸೀಫ್ ಓಜಾಲ ಕಬಕ, ಉದೈಫ್ ತಾರಿಗುಡ್ಡೆ, ರಫೀಕ್ ಯಾನೆ ಕಪ್ಪು ರಫೀಕ್ ಕೆಮ್ಮಾಯಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ಒಂದು  ಕಾರು, ಆಟೊ ರಿಕ್ಷಾ, ಎರಡು ಟಿವಿ, 2 ಲ್ಯಾಪ್ ಟ್ಯಾಪ್, ಒಂದು ಇಸ್ತ್ರಿ ಪೆಟ್ಟಿಗೆ ಹಾಗೂ ಆರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಆರೋಪಿಗಳು ಸಂಪ್ಯ, ಕೆಮ್ಮಾಯಿ , ಮಾಡ್ನೂರು ಗ್ರಾಮದ ಅಮ್ಚಿನಡ್ಕ, ಪುತ್ತೂರು ನಗರದ ಕೆದಿಲ, ಬಂಟ್ವಾಳ ತಾಲೂಕಿನ ದಾಸನಕೋಡಿ, ಧರ್ಮಸ್ಥಳದ ಚಾರ್ಮಾಡಿ, ಬೆಳ್ಲಾರೆ ಠಾಣಾ ವ್ಯಾಪ್ತಿಯ ಅಲೆಕ್ಕಾಡಿ, ಸುಳ್ಯ ತಾಲೂಕಿನ ಕದಿರಡ್ಕದಲ್ಲಿ ನಡೆದ ಮನೆ ಹಾಗೂ ಅಂಗಡಿ ಕಳ್ಳತನ ಮತ್ತು ಅಡಿಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಉಪ್ಪಿನಂಗಡಿ, ಬೆಳ್ಳಾರೆ ಹಾಗೂ ಪುತ್ತೂರು ನಗರದಲ್ಲಿ ನಡೆದ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಪ್ಯ ಠಾಣೆ ಎಸ್ ಐ ಅಬ್ದುಲ್‌ ಖಾದರ್ ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News