ಅದಾನಿಯಿಂದ ರಾಜ್ಯದ 20 ತಾಲೂಕುಗಳಲ್ಲಿ ಸೋಲಾರ್ ಘಟಕ

Update: 2017-08-17 17:18 GMT

ಪಡುಬಿದ್ರಿ, ಆ.17: ಅದಾನಿ ಕಂಪೆನಿ ರಾಜ್ಯ ಸರಕಾರದ ಸಹಯೋಗದಲ್ಲಿ ಕರ್ನಾಟಕದ 20 ತಾಲೂಕುಗಳಲ್ಲಿ ಸೋಲಾರ್ ಘಟಕಗಳನ್ನು ಸ್ಥಾಪಿಸಲಿದೆ ಎಂದು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟಡ್ ಮತ್ತು ಅದಾನಿ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದ್ದಾರೆ.

ಗುರುವಾರ ಮುಂಬೈನ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪದಾಧಿಕಾರಿಗಳು ಎಲ್ಲೂರಿನ ಅದಾನಿ ಒಡೆತನದ ಯುಪಿಸಿಎಲ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕಂಪೆನಿಯ ಬಗ್ಗೆ ಈ ಮಾಹಿತಿ ನೀಡಿದರು.

ಅದಾನಿ ಕಂಪನಿ ಬೆಂಗಳೂರು, ರಾಯಚೂರು, ಗುಲ್ಬರ್ಗ ಸಹಿತ ರಾಜ್ಯದ ವಿವಿದೆಡೆ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕಾರ್ಯಸೂಚಿ ಹಾಕಿಕೊಂಡಿದ್ದು, ಒಟ್ಟು 900 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿಯನ್ನು ಹೊಂದಿದೆ. ಪಾವಗಡದಲ್ಲಿ ಸ್ವತಂತ್ರವಾಗಿ 260 ಮೆ.ವ್ಯಾಟ್ ಘಟಕನ್ನು ಈಗಾಗಲೇ ಹೊಂದಿದೆ. ಸೌರವಿದ್ಯುತ್ ಮೂಲಕ ರಾಜ್ಯಾದ್ಯಂತ ಕಂಪೆನಿ 900 ಮೆ.ವಾ. ವಿದ್ಯುತ್ ಉತ್ಪಾದಿಸಲಿದೆ ಎಂದು ಕಿಶೋರ ಆಳ್ವ ತಿಳಿಸಿದರು.

ಕಂಪೆನಿ ವಿಸ್ತರಣೆ: ಮುಂದಿನ ದಿನಗಳಲ್ಲಿ ಯುಪಿಸಿಎಲ್ ಕಂಪೆನಿ ವಿಸ್ತರಣೆ ಗೊಳ್ಳಲಿದ್ದು, 14,500 ಕೋಟಿ ರೂ ವಿನಿಯೋಗಿಸಲಿದೆ. ಇದಕ್ಕಾಗಿ ಘಟಕದ ಆಸುಪಾಸಿನಲ್ಲಿ 766 ಎಕ್ರೆ ಜಮೀನಿನ ಅವಶ್ಯಕತೆಯಿದ್ದು, ಈಗಾಗಲೇ 166 ಎಕ್ರೆ ಜಮೀನು ದೊರಕಿದೆ. ಉಳಿದ 561 ಎಕ್ರೆ ಜಮೀನು ಶೀಘ್ರ ದೊರೆಯುವ ನಿರೀಕ್ಷೆ ಇದೆ. ಕಂಪೆನಿ ವಿಸ್ತರಣೆಯಿಂದ ಸ್ಥಳೀಯವಾಗಿ ಮತ್ತಷ್ಟು ಉದ್ಯೋಗಾ ವಕಾಶಗಳು ದೊರೆಯಲಿದೆ ಎಂದರು.

ಮುಂದಿನ ದಿನಗಳಲ್ಲಿ ಯುಪಿಸಿಎಲ್ ಕಂಪೆನಿ ವಿಸ್ತರಣೆ ಗೊಳ್ಳಲಿದ್ದು, 14,500 ಕೋಟಿ ರೂ ವಿನಿಯೋಗಿಸಲಿದೆ. ಇದಕ್ಕಾಗಿ ಘಟಕದ ಆಸುಪಾಸಿನಲ್ಲಿ 766 ಎಕ್ರೆ ಜಮೀನಿನ ಅವಶ್ಯಕತೆಯಿದ್ದು, ಈಗಾಗಲೇ 166 ಎಕ್ರೆ ಜಮೀನು ದೊರಕಿದೆ. ಉಳಿದ 561 ಎಕ್ರೆ ಜಮೀನು ಶೀಘ್ರ ದೊರೆಯುವ ನಿರೀಕ್ಷೆ ಇದೆ. ಕಂಪೆನಿ ವಿಸ್ತರಣೆಯಿಂದ ಸ್ಥಳೀಯವಾಗಿ ಮತ್ತಷ್ಟು ಉದ್ಯೋಗಾ ವಕಾಶಗಳು ದೊರೆಯಲಿದೆ ಎಂದರು. ನೀರಿನ ಘಟಕ: 450 ಕೋಟಿ ರೂ. ವೆಚ್ಚದಲ್ಲಿ ಹಾರುಬೂದಿ ಸಿಮೆಂಟ್ ತಯಾರಿಕೆ ಘಟಕವನ್ನು ಕಂಪೆನಿ ಸ್ಥಾಪಿಸಲಿದೆ. ಇದರಿಂದ 65 ಜನರಿಗೆ ಶಾಶ್ವತ ಉದ್ಯೋಗ ಸೃಷ್ಟಿಯಾಗಲಿದೆ. ಶುದ್ಧಕುಡಿಯುವ ನೀರಿನ ಘಟಕವನ್ನೂ ನಿರ್ಮಿಸಲಿದ್ದು, ಬೃಹತ್ ಕೈಗಾರಿಕೆಗಳು ಸೇರಿದಂತೆ ಕಾಪು ಕ್ಷೇತ್ರದ ಒಂದು ಲಕ್ಷ ಮತ್ತು ಮೂಲ್ಕಿ, ಸುರತ್ಕಲ್ ಪ್ರದೇಶದ ಒಂದು ಲಕ್ಷ ಜನರಿಗೆ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು.

ಶ್ರೀಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ವಿದ್ಯುತ್ ಸಚಿವರೊಂದಿಗೆ ಮಾತುಕತೆ ನಡೆಸಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ದಿನದ 24ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯಿಸಲಾಗುವುದು ಎಂದರು. ರಾಜ್ಯಕ್ಕೆ ವಿದ್ಯುತ್ ನೀಡುವ ಇಷ್ಟೊಂದು ದೊಡ್ಡ ಘಟಕ ಇಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ಉಡುಪಿ ಜಿಲ್ಲೆಗೆ ಮಾತ್ರ ಯೋಜನೆಯಿಂದ ನಿರಂತರ ವಿದ್ಯುತ್ ನೀಡಲಾಗುತ್ತಿದೆ ಎಂದರು.

ಸಮಿತಿಯ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಮುಖಂಡರಾದ ಕೆ.ಪಿ. ಜಗದೀಶ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಫೆಲಿಕ್ಸ್ ಡಿಸೋಜ, ಚಂದ್ರಶೇಖರ್ ಬೆಲ್ಚಡ, ಹರೀಶ್‌ಕುಮಾರ್ ಶೆಟ್ಟಿ, ಸುರೇಂದ್ರ ಮೆಂಡನ್, ಪ್ರೊ. ಶಂಕರ್, ಕಂಪೆನಿಯ ಯೋಜನಾ ಮುಖ್ಯಸ್ಥ ಸುಂದರೇ, ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೀರೆ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News