ಎಸ್‌ಸಿ ಕಾಲನಿಗೆ ಎಸ್‌ಪಿ ಭೇಟಿ
Update: 2017-08-17 17:59 GMT
ಮಂಗಳೂರು, ಆ.17: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಡಾ. ಸಿ.ಬಿ. ವೇದಮೂರ್ತಿ ಅವರು ಕಾವೂರಿನ ಎಸ್‌ಸಿ ಎಸ್‌ಟಿ ಕಾಲನಿಗೆ ಭೇಟಿ ನೀಡಿದರು.ಕಾವೂರು ಬಬ್ಬುಸ್ವಾಮಿ ದೇವಸ್ಥಾನ ಬಳಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಯಲ್ಲಿ ಕುಂದುಕೊರತೆಗಳನ್ನು ಅವರು ಆಲಿಸಿ, ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.