ಕಾಸರಗೋಡು: ಬಸ್ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ

Update: 2017-08-18 09:52 GMT

ಕಾಸರಗೋಡು, ಆ.18: ಪ್ರಯಾಣ ದರ  ಏರಿಕೆ ಸೇರಿದಂತೆ  ಹಲವು  ಬೇಡಿಕಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸು ಮಾಲಕರು ಕರೆ ನೀಡಿರುವ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ಸು ಮುಷ್ಕರವು ಗ್ರಾಮೀಣ ಪ್ರದೇಶದ ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. 

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಸಂಚಾರ ನಡೆಸುತ್ತಿರುವುದರಿಂದ ಪ್ರಯಾಣಿಕರಿಗೆ ಸಮಸ್ಯೆ ತಲೆದೋರಿಲ್ಲ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ದುಬಾರಿ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವಂತಾಗಿದೆ. 

ವಿದ್ಯಾರ್ಥಿಗಳ ರಿಯಾಯಿತಿ ಪ್ರಯಾಣ ದರ ಏರಿಕೆ ಮಾಡಬೇಕು, ಡೀಸೆಲ್ ದರವನ್ನು ಏಕೀಕರಣ ಗೊಳಿಸಬೇಕು, ರದ್ದು ಗೊಳಿಸಿರುವ   ಖಾಸಗಿ ಬಸ್ಸು ಪರ್ಮಿಟ್ ಮರುಪರಿಷ್ಕರಿಸಬೇಕು, ಇದರ ಜೊತೆಗೆ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಡೀಸೆಲ್ ಲೀಟರ್ ಗೆ  56.12 ರೂ. ಇದ್ದಾರೆ. ಮೀಟರ್ ಗಳಷ್ಟು ಅಂತರದ ಕೇರಳದ ಪಂಪ್ ಗಳಲ್ಲಿ 61 ರೂ. ಇದೆ. ಅಂದರೆ  ಐದು ರೂ.ಗಳ ವ್ಯತ್ಯಾಸ  ಹೊಂದಿದೆ. ಜಿ.ಎಸ್.ಟಿ. ಜಾರಿಯಾದ ಬಳಿಕ ಕರ್ನಾಟಕ ಸರಕಾರ ತೆರಿಗೆ ವಿನಾಯಿತಿ ನೀಡಿದ್ದು, ಕೇರಳ ಸರಕಾರ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಖಾಸಗಿ ಬಸ್ ಮುಷ್ಕರಕ್ಕೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News